ನಿಗದಿಯಾದ ಮೀಸಲಾತಿಗೆ ಅರ್ಹ ಸದಸ್ಯರೇ ಇಲ್ಲ : ಕಂಗಾಲಾದ ಸದಸ್ಯರು..!

ಶರಣಪ್ಪ ಕುಂಬಾರ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ಮಾಲಗಿತ್ತಿ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾದ ಹಿಂದುಳಿದ ‘ವರ್ಗ ಬ (ಮಹಿಳೆ)’ ಮೀಸಲಾತಿಗೆ ಸಂಬಂಧಿಸಿದ ಅಭ್ಯರ್ಥಿಗಳು ಇಡೀ ಗ್ರಾಮ ಪಂಚಾಯತಿ ಸದಸ್ಯರುಗಳಲ್ಲಿ ಯಾರೊಬ್ಬರು ಇಲ್ಲದಿರುವುದು ವಿಶೇಷ..!

ಕಳೆದ 16-06-2023 ರಂದು ಕುಷ್ಟಗಿ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಿ, ಜಿಲ್ಲಾಡಳಿತ ಘೋಷಣೆ ಕೂಡಾ ಮಾಡಿತ್ತು. ಆದರೆ, ತಾಲೂಕಿನ ಮಾಲಗಿತ್ತಿ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಸ್ಥಾನಕ್ಕೆ “ಹಿಂದುಳಿದ ವರ್ಗ ಬ (ಮಹಿಳೆ)” ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ “ಸಾಮಾನ್ಯ” ಎಂದು ಮೀಸಲಾತಿ ಅನೌನ್ಸ ಮಾಡಲಾಗಿತ್ತು. ಆದರೆ, ಪಂಚಾಯತಿ ವ್ಯಾಪ್ತಿಯ ಮಾಲಗಿತ್ತಿ, ಪಟ್ಟಲಚಿಂತಿ ಹಾಗೂ ಕಡಿವಾಲ ಗ್ರಾಮಗಳಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಿಗದಿಯಾದ ಹಿಂದುಳಿದ ವರ್ಗ ಬ (ಮಹಿಳೆ) ಮೀಸಲಾತಿಗೆ ಸಂಬಂಧಿಸಿದ ಅನೇಕ ಉಪಜಾತಿಗಳಲ್ಲಿನ ಯಾವೊಬ್ಬ ಮಹಿಳಾ ಮಣಿಗಳು ಕೂಡಾ ಜಯಶಾಲಿಯಾಗಿಲ್ಲ. ಇಡೀ ಗ್ರಾಮ ಪಂಚಾಯತಿಯಲ್ಲಿಯೇ ಹಿಂದುಳಿದ “ಬ” ವರ್ಗಕ್ಕೆ ಸಂಬಂಧಿಸಿದ ಮಹಿಳೆಯರು ಜಯಶಾಲಿ ಆಗದಿರುವುದು ಅಧ್ಯಕ್ಷ ಸ್ಥಾನವು ಯಾರ ಪಾಲಾಗದೆ ಹಾಗೆಯೇ ಇರುವ ವಿಷಯ ಕಗ್ಗಂಟಾಗಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜಿಲ್ಲಾಡಳಿತ ಯಾವ ತಿರ್ಮಾನಕ್ಕೆ ಮುಂದಾಗಲಿದೆ ಎಂಬ ಮಿಲಿಯನ್ ಡಾಲರ್ ಪ್ರಶ್ನೆಗಳು ಪಂಚಾಯತಿ ಸರ್ವ ಸದಸ್ಯರನ್ನು ಕಾಡಲಾರಂಭಿಸಿವೆ..!!

ಪುರುಷ ಸದಸ್ಯ ಆಯ್ಕೆ : ಅಧ್ಯಕ್ಷ ಗಾದಿಗಾಗಿ ನಿಗದಿಯಾಗಿರುವ “ಹಿಂದುಳಿದ ವರ್ಗ ಬ (ಮಹಿಳೆ)” ಮೀಸಲಾತಿ ಬದಲಾಗಿ ಇದೇ ಮೀಸಲಾತಿಯ ಪುರುಷ ಸದಸ್ಯ ವೀರೇಶ ಅಂಗಡಿ ಎಂಬುವರು ಮಾಲಗಿತ್ತಿ ಗ್ರಾಮದಿಂದ ಆಯ್ಕೆಯಾಗಿದ್ದಾರೆ. ನಿಗದಿಯಾಗಿರುವ ಮೀಸಲಾತಿಯ ಬದಲಾಗಿ ಹಿಂದುಳಿದ ವರ್ಗ ಬ ಮೀಸಲಾತಿಯಲ್ಲಿ ಪುರುಷ ಸದಸ್ಯನಿದ್ದಾನೆ. ಈ ಸದಸ್ಯನಿಗೆ ಮೀಸಲಾತಿ ಬದಲಾಯಿಸಬಹುದಲ್ಲ ಎಂಬ ಪ್ರಶ್ನೆವೊಂದು ಕೂಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಹರಿದಾಡುವ ಮಾತುಗಳಲ್ಲಿ ಇದೊಂದಾಗಿದೆ..!?