ಅಜ್ಜ-ಅಜ್ಜಿ ಬುದ್ಧಿವಾದಕ್ಕೆ ಯುವಕ ಆತ್ಮಹತ್ಯೆಗೆ ಶರಣು!

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ: ಸರಿಯಾಗಿ ಶಾಲೆಗೆ ಹೋಗಿ ಚೆನ್ನಾಗಿ ಓದು ಎಂದು ಅಜ್ಜ, ಅಜ್ಜಿ ಬುದ್ದಿವಾದ ಹೇಳಿದ್ದಕ್ಕೆ ಮನನೊಂದ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹುಲಿಯಾಪೂರ ಗ್ರಾಮದಲ್ಲಿ ದಿನಾಂಕ 07-08-2023ರಂದು ಸೋಮವಾರ ನಡೆದಿದೆ.!

17 ವಯಸ್ಸಿನ ಮಾಳಿಂಗರಾಯ ತಂದೆ ಚಿದಾನಂದಪ್ಪ ಕಜ್ಜೇರ ಮೃತ ಯುವಕ. ಕಳೆದ 12 ವರ್ಷಗಳಿಂದ ಅಜ್ಜ- ಅಜ್ಜಿಯ ಮನೆಯಲ್ಲಿ ವಾಸವಾಗಿದ್ದ ಯುವಕನಿಗೆ ಸರಿಯಾಗಿ ಶಾಲೆಗೆ ಹೋಗುತ್ತಿರಲಿಲ್ಲ. ಚೆನ್ನಾಗಿ ವಿದ್ಯಾಭ್ಯಾಸ ಮಾಡುವಂತೆ ಬುದ್ದಿವಾದ ಹೇಳಿದ್ದಲ್ಲದೇ, ಅವನ ತಂದೆಯ ಗಮನಕ್ಕೂ ತಂದಿದ್ದಾರೆ.

ಬೆಳಗಿನಜಾವ ಬಹಿರ್ದೆಸೆಗೆ ಹೋಗುವುದಾಗಿ ಹೇಳಿ ಹೋದ ಯುವಕ, ಜಮೀನಿಗೆ ಸಿಂಪಡಿಸುವ ಕ್ರಿಮಿನಾಶಕ ಸೇವಿಸಿ ಮನೆಗೆ ಹಿಂತಿರುಗಿದ್ದಾನೆ. ಶಾಲೆಗೆ ಹೋಗುವುದು ನನಗೆ ಇಷ್ಟವಿಲ್ಲ ಎಂದು ಅಜ್ಜ – ಅಜ್ಜಿಗೆ ತಿಳಿಸಿದ್ದಾನೆ. ಬಳಿಕ ಯುವಕ ಅಸ್ವಸ್ಥಗೊಂಡಿದ್ದನ್ನು ಗಮನಿಸಿ ಅಜ್ಜ- ಅಜ್ಜಿ, ಕೂಡಲೇ ಆಸ್ಪತ್ರೆಗೆ ದಾಖಲಿಸಿದಾಗ ವಿಷ ಸೇವಿಸಿರುವುದು ಖಚಿತವಾಗಿದೆ. ವೈದ್ಯರ ಚಿಕಿತ್ಸೆ ಫಲಿಸದೆ ಯುವಕ ಸಾವನ್ನಪ್ಪಿದ್ದಾನೆ ಎಂದು ಮೃತ ಯುವಕನ ತಂದೆ ಚಿದಾನಂದಪ್ಪ ಕಜ್ಜೇರ ಠಾಣೆಗೆ ನೀಡಿದ ದೂರನಲ್ಲಿ ತಿಳಿಸಿದ್ದಾರೆ. ಈ ಕುರಿತು ತಾವರಗೇರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.!!