ಕುಷ್ಟಗಿ ತಾಲೂಕು ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ಪ ವಾಘ್ಮೋರೆ ನೇಮಕ

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ : ರಾಜ್ಯ ಸರಕಾರಿ ನೌಕರರ ಸಂಘ ಕುಷ್ಟಗಿ ತಾಲೂಕಾ ಘಟಕಕ್ಕೆ ನೂತನ ಪ್ರಧಾನ ಕಾರ್ಯದರ್ಶಿಯಾಗಿ ಶಿವಪ್ಪ ವಾಘ್ಮೋರೆ ಅವರನ್ನು ಉಪಾಧ್ಯಕ್ಷರಾಗಿ ವಿರುಪಾಕ್ಷಪ್ಪ ಅಂಗಡಿ ಅವರನ್ನು ನೇಮಕ ಮಾಡಲಾಗಿದೆ.!

ಈ ಕುರಿತು ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ದಿನಾಂಕ 29-08-2023 ಮಂಗಳವಾರ ದಿನ ತಾಲೂಕ ಅಧ್ಯಕ್ಷ ಬಾಲಾಜಿ ಬಳಿಗಾರ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ರಾಜಿನಾಮೆಯಿಂದ ತೆರವಾದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ  ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಪ್ರಕ್ರಿಯೆ ನಡೆಸಲಾಗಿತು. ಸರ್ವ ಸದಸ್ಯರ ಸಮ್ಮತಿ ಮೇರೆಗೆ ಇವರುಗಳನ್ನು ನೇಮಿಸಲಾಗಿದೆ ಎಂದು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ನೇಮಕ ಪ್ರಕ್ರಿಯೆಯಲ್ಲಿ ತಾಲೂಕ ಗೌರವಾಧ್ಯಕ್ಷ ಶ್ರೀನಿವಾಸ ನಾಯಕ, ಜಿಲ್ಲಾ ಉಪಾಧ್ಯಕ್ಷ ಅಹ್ಮದ್‌ ಹುಸೇನ್‌ ಆದೋನಿ, ಪರಶುರಾಮ ಹೆಚ್, ಸಂತೋಷ ಸಿ.ಕೆ., ಜಗದೀಶ ಸೂಡಿ, ಅಡಿವೆಪ್ಪ ಕೊನಸಾಗರ, ರಾಚಪ್ಪ ಯರಗಲ್‌ ಮತ್ತು ಖಾಸಿಂಸಾಬ ಕಲಾಲಬಂಡಿ ಮುಂತಾದವರು ಹಾಜರಿದ್ದರು.