ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ವಣಗೇರೆ ಟೋಲ್ ಪ್ಲಾಜಾ ಬಳಿ ವಾಹನವೊಂದು ಚಲಾಯಿಸಿಕೊಂಡು ಬಂದ ಮೂವರು ವ್ಯಕ್ತಿಗಳು ಟೋಲ್ ಸಿಬ್ಬಂದಿ ಜೊತೆಗೆ ಮಾತಿಗೆ ಮಾತು ಬೆಳೆದು ಒಬ್ಬರಿಗೊಬ್ಬರು ಮಾರಾಮಾರಿಗಿಳಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ವಣಗೇರಿ ಟೋಲ್ ಪ್ಲಾಜಾಬಳಿ ಕಳೆದೆರಡು ದಿನಗಳ ಹಿಂದೆ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.
ವಾಹನ ಚಲಾಯಿಸಿಕೊಂಡು ಬಂದ ವ್ಯಕ್ತಿ ಮತ್ತು ಆತನ ಇಬ್ಬರು ಸಹಚರರು ತಾಲೂಕಿನ ವಣಗೇರೆ ಗ್ರಾಮದವರಾಗಿದ್ದು, ಟೋಲಗೇಟ್ ಸಿಬ್ಬಂದಿ ಜೊತೆಗೆ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಒಬ್ಬರ ತಲೆಗೆ ರಕ್ತಗಾಯಗಳಾಗಿವೆ. ಮತ್ತೋರ್ವನಿಗೆ ಒಳಪೆಟ್ಟುಗಳಾಗಿವೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಗಾಯಾಳನ್ನು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳನ್ನು ಪರಿಶೀಲಿಸಲಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಯಾರು ದೂರು ನೀಡದ ಹಿನ್ನೆಲೆ ಪ್ರಕರಣ ದಾಖಲಾಗಿಲ್ಲ ಎಂದು ಸಿಪಿಐ ಯಶವಂತ ಬಿಸನಹಳ್ಳಿ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.