ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನೆಲ್ಲೆಡೆ ಭಾರಿ ಮಳೆಯಾಗಿದ್ದು, ತಾಲೂಕಿನ ಹನಮನಾಳ, ಕಡಿವಾಲ ಗ್ರಾಮಗಳಲ್ಲಿ ಮನೆ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ.!
ತಾಲೂಕಿನ ಬಹುತೇಕ ಕಡೆಗೆ ರಾತ್ರಿ ಸುಮಾರು 10 ಗಂಟೆಯಿಂದ ಸೋಮವಾರ ಬೆಳಗಿನ ಜಾವ 2 ಗಂಟೆಯ ವರೆಗೆ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸ್ತಕ್ಕೆ ಕಾರಣವಾಗಿದೆ. ತಾಲೂಕಿನ ಹನುಮಸಾಗರ, ದೋಟಿಹಾಳ ಭಾಗದಲ್ಲಿ ಯಾವುದೇ ಜೀವ ಹಾಗೂ ಮನೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ.
ಪಟ್ಟಲಚಿಂತಿ, ಕಡಿವಾಲ ಭಾಗದಿಂದ ಯಥೇಚ್ಛವಾಗಿ ಹಳ್ಳದ ಮೂಲಕ ಹರಿದು ಬಂದ ಮಳೆ ನೀರು ಕಡಿವಾಲ ಗ್ರಾಮ ಸೇರಿದಂತೆ ಹುನುಮನಾಳ ಗ್ರಾಮದ ಸರ್ಕಾರಿ ಆಸ್ಪತ್ರೆ ಸೇರಿದಂತೆ ನಾಲ್ಕನೇ ವಾರ್ಡಿನ ಪ್ರತಿ ಮನೆ ಮನೆಗಳಿಗೆ ನುಗ್ಗಿದೆ. ರಸ್ತೆ ಇಕ್ಕೆಲಗಳಲ್ಲಿ ಭಾರಿ ಪ್ರಮಾಣದ ನೀರು ಹರಿದಿದೆ. ಮನೆಗಳಲ್ಲಿ ಅಡುಗೆ ಸಾಮಗ್ರಿ, ಇಲೇಕ್ಟ್ರೀಕಲ್ ಸಾಮಗ್ರಿಗಳು, ದವಸ ಧಾನ್ಯಗಳು ನೀರು ಪಾಲಾಗಿವೆ. ಕುಳಿತು ಊಟ ಮಾಡಲು ಹಾಗೂ ಮಲಗಲು ಸ್ಥಳವಿಲ್ಲದೇ ಮಕ್ಕಳು ವಯೋವೃದ್ದರು ಬಹಳ ತೊಂದರೆ ಅನುಭವಿಸುವಂತಾಗಿತು ಮಳೆಯ ಅವಾಂತರದಿಂದ ಕಡಿವಾಲ ಗ್ರಾಮ ಹಾಗೂ ಹನುಮನಾಳ ಗ್ರಾಮದ ಜನಜೀವನ ಅಸ್ತವ್ಯಸ್ತಕ್ಕೆ ಕಾರಣವಾಗಿತು.
ತಾಲೂಕಿನಲ್ಲಿ ಭಾನುವಾರ ಸುರಿದ ಮಳೆ ಪ್ರಮಾಣ ಹೀಗಿದೆ.
ಕುಷ್ಟಗಿ 38.2 ಮಿ.ಮೀ.
ಹನುಮಸಾಗರ 45.1 ಮಿ.ಮೀ.
ಹನುಮನಾಳ 154.8 ಮಿ.ಮೀ.
ದೋಟಿಹಾಳ 79.2 ಮಿ.ಮೀ.
ಕಿಲ್ಲಾರಹಟ್ಟಿ 12.4 ಮಿ.ಮೀ.
ತಾವರಗೇರಾ 29.0 ಮಿ.ಮೀ. ಮಳೆಯಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.


