ಸಂಗಮೇಶ ಮುಶಿಗೇರಿ
ಕೃಷಿ ಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ಪಟ್ಟಣದ ಅನ್ನದಾನೇಶ್ವರ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸಸ್ಯ ಶಾಮಲ ಕಾರ್ಯಕ್ರಮ ಸೋಮವಾರ ನಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಅವರು ಶಾಲಾ ಆವರಣದಲ್ಲಿ ಸಸಿ ನೆಡೆಯುವುದರ ಮೂಲಕ ಸಾಂಕೇತಿಕವಾಗಿ ಸಸ್ಯ ಶಾಮಲ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈವೇಳೆ ಮಾತನಾಡಿದ ಅವರು, ವಿದ್ಯಾರ್ಥಿಗಳು ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಶ್ರಮದಾನ ವಹಿಸಬೇಕು ಹಾಗೂ ಇವರ ಜೊತೆ ಶಿಕ್ಷಕರು, ಪೋಷಕರು, ಎಸ್.ಡಿ.ಎಂ.ಸಿ ಸದಸ್ಯರು ಕೈಜೋಡಿಸಬೇಕು. ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಪರಿಸರ ಪ್ರೇಮ, ಪರಿಸರ ಜಾಗೃತಿ ಮತ್ತು ಅರಣ್ಯ ಸಂರಕ್ಷಣೆಯ ಕುರಿತು ಕಾಳಜಿಯನ್ನು ಉಂಟುಮಾಡುವುದು ‘ಸಸ್ಯ ಶ್ಯಾಮಲ’ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ತಿಳಿಸಿದರು.
ಈ ವೇಳೆ ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳಾದ ಲೋಕೇಶ್ ಜಿ. ಡಾ ಜೀವನಸಾಬ್ ವಾಲಿಕಾರ್, ಸಿಆರ್ಪಿ ಸೋಮಲಿಂಗಪ್ಪ ಗುರಿಕಾರ್, ಮೆಹಬೂಬ್ ಮಹಣೆದಾಳ್, ಶರಣಪ್ಪ ಉಪ್ಪಾರ್, ವಾರ್ಡಿನ ನಿವಾಸಿಗಳಾದ ಬಸವರಾಜ್ ಗಾಣಿಗರ, ರಾಘವೇಂದ್ರ ಕುಲಕರಣಿ, ಮುಖ್ಯೋಪಾಧ್ಯಯರಾದ ಭರಮಪ್ಪ ಪರಸಾಪುರ್, ವಿಜಯಲಕ್ಷ್ಮೀ ಅಬ್ಬಿಗೇರಿ ಇತರರು ಉಪಸ್ಥಿತರಿದ್ದರು.


