ಸೆ.15 ರಂದು ಸಂವಿಧಾನ ಓದು ಕಾರ್ಯಕ್ರಮಕ್ಕೆ ತಾಲೂಕಾಡಳಿತ ಸಾರ್ವಜನಿಕರಿಗೆ ಕರೆ

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕುಷ್ಟಗಿ : ಅಂತರಾಷ್ಟ್ರೀಯ ಪ್ರಜಾಪ್ರಭುತ್ವದ ದಿನಾಚರಣೆ ಪ್ರಯುಕ್ತ ಸೆ.15 ರಂದು ಶುಕ್ರವಾರ ಸಂವಿಧಾನ ಪೀಠಿಕೆ ಒಟ್ಟಾಗಿ ಓದುವ ಬೃಹತ್ ಕಾರ್ಯಕ್ರಮವನ್ನು ತಾಲೂಕಾಡಳಿತ ಹಮ್ಮಿಕೊಂಡಿದೆ.

ಈ ಕುರಿತು ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರು ಇಂದು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ, ಸರ್ಕಾರದ ಆದೇಶದ ಮೇರೆಗೆ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಬೆಳಗ್ಗೆ 10-00 ಗಂಟೆಗೆ ಸಂವಿಧಾನ ಪೀಠಿಕೆ ಓದುವ ಮೂಲಕ ಅಂತರ ರಾಷ್ಟ್ರೀಯ ಪ್ರಜಾಪ್ರಭುತ್ವದ ದಿನ ಆಚರಿಸಲಾಗುತ್ತಿದೆ. ಅಂದು ತಾಲ್ಲೂಕಾ ಕೇಂದ್ರ ಸ್ಥಳದ ಶಾಲಾ-ಕಾಲೇಜಗಳ ವಿದ್ಯಾರ್ಥಿಗಳು, ಮುಖ್ಯೋಪಾಧ್ಯಯರು, ಪ್ರಾಚಾರ್ಯರು, ಪೌರಕಾರ್ಮಿಕರು, ಅಂಗನವಾಡಿ ಸಹಾಯಕರು, ಕಾರ್ಯಕರ್ತರು, ಎ.ಪಿ.ಎಂ.ಸಿ ವರ್ತಕರು ಹಾಗೂ ಸಹಾಯಕರು, ವಕೀಲರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಸೇರಿದಂತೆ ಸುಮಾರು 2000 ಜನರು ಪಾಲ್ಗೊಳ್ಳತ್ತಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಅಂದು ಬೆಳ್ಳಗೆ 9-30 ಗಂಟೆಯೊಳಗೆ ಹಾಜರಿದ್ದು ಕಾರ್ಯಕ್ರಮ ಯಶಸ್ವಿಗೊಳಸಲು ಪ್ರಕಟಣೆಯಲ್ಲಿ ಕೋರಿದ್ದಾರೆ.