ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪೊಲೀಸ್ ಠಾಣೆಗೆ ಅಪರಾಧ ವಿಭಾಗದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಮಲ್ಲಪ್ಪ ವಜ್ರದ ಅವರು ನಿಯುಕ್ತಿಗೊಂಡಿದ್ದಾರೆ.!
ಕಳೆದ ಸುಮಾರು ಐದು ವರ್ಷಗಳಿಂದ ತಾವರಗೇರಾ ಠಾಣೆಯಲ್ಲಿ ಎಎಸೈ ಆಗಿ ಕರ್ತವ್ಯದಲ್ಲಿದ್ದ ಮಲ್ಲಪ್ಪ ವಜ್ರದ ಅವರ ಸೇವಾ ಹಿರಿತನದ ಆಧಾರದ ಮೇರೆಗೆ ಅಪರಾಧ ವಿಭಾಗದ ಪಿಎಸ್’ಐ ಆಗಿ ನಿಯುಕ್ತಿಗೊಂಡಿದ್ದು, ಗಂಗಾವತಿ ಡಿವೈಎಸ್ಪಿ ಸಿದ್ಧಲಿಂಗಪ್ಪಗೌಡ ಪಾಟೀಲ್ ಅವರು ಶನಿವಾರ ಹೂಗುಚ್ಚ ನೀಡುವ ಮೂಲಕ ಅಭಿನಂದಿಸಿದರು. ನೂತನ ಕ್ರೈಂ ಪಿಎಸ್’ಐ ಆಗಿ ಅಧಿಕಾರ ಸ್ವೀಕರಿಸಿದ ಮಲ್ಲಪ್ಪ ವಜ್ರದ ಅವರಿಗೆ ಜಿಲ್ಲೆಯ ತಾವರಗೇರಾ, ಕುಷ್ಟಗಿ, ಹನುಮಸಾಗರ ಪೊಲೀಸ್ ಠಾಣೆ ಪಿಎಸ್’ಐ, ಎಎಸೈ ಸೇರಿದಂತೆ ಸರ್ವ ಪೊಲೀಸ್ ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.!!