ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಆಟವಾಡುತಿದ್ದ 3.5 ವರ್ಷದ ಮಗು ಮನೆಯ ಮೊದಲನೇ ಮಹಡಿಯಿಂದ ಆಯಾತಪ್ಪಿ ಬಿದ್ದು ಕರಳು ಆಚೆ ಬಂದ ಹೃದಯವಿದ್ರಾವಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಕುಷ್ಟಗಿ ಪಟ್ಟಣದ ಗೌರಿ ನಗರದ ಮಹಡಿ ಮನೆಯೊಂದರಲ್ಲಿ ಶನಿವಾರ ರಾತ್ರಿ 9.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ಪಟ್ಟಣದ ದುರ್ಗಾ ಕಾಲೋನಿಯ ನಿವಾಸಿ ಸಂಗೀತ ಕಲಾವಿದ ಹೊಳಿಯಪ್ಪ ಗುರಿಕಾರ ಅವರು, ತಮ್ಮ ಮಗಳು ಸೇರಿದಂತೆ ಕುಟುಂಬ ಸಮೇತ ಗೌರಿ ನಗರದಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಸೀರೆ ಕಾರಣ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮದ ಸಂಭ್ರಮದಲ್ಲಿ ಬಂಧು-ಬಳಗದವರೊಂದಿಗೆ ಭಾಗಿಯಾಗಿದ್ದರು. ರಾತ್ರಿ ಮಹಡಿ ಮನೆಯ ಮೇಲೆ ಏರ್ಪಡಿಸಿದ್ದ ಭೋಜನ ಕೂಟದಲ್ಲಿ ಪಾಲ್ಗೊಂಡಿದ್ದರು. ಆ ಸಮಯದಲ್ಲಿ 3.5 ವರ್ಷದ ಮಗುವೊಂದು ಎಲ್ಲರೂ ಕುಳಿತುಕೊಳ್ಳಲು ಇರಿಸಿದ್ದ ಕುರ್ಚಿ ಮೇಲೆ ನಿಂತು ಕೆಳಗಡೆ ಇಣುಕಿದ್ದಾಳೆ. ಆ ಸಂದರ್ಭದಲ್ಲಿ ಆಯಾತಪ್ಪಿ ಸುಮಾರು 20 ಅಡಿ ಎತ್ತರದಿಂದ ಕೆಳಗಡೆ ಬಿದ್ದಿದ್ದಾಳೆ., ಬೀಳುವ ರಭಸದಲ್ಲಿ ಗಿಡದ ಟೊಂಗೆಯೊಂದು ಹೊಟ್ಟೆ ಸೇರಿದ ಪರಿಣಾಮವಾಗಿ ಮಗುವಿನ ಹೊಟ್ಟೆಯ ಕರಳುಗಳು ಕಡಿಗೆ ಹಾದಿವೆ. ತಕ್ಷಣ ಮಗುವನ್ನು ಸ್ಥಳೀಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಬಳಿಕ ವೈದ್ಯರ ಸಲಹೆಯಂತೆ ಪಾಲಕರು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮಗುವಿನ ಹೊಟ್ಟೆಯಿಂದ ಕರಳು ಸೇರಿದಂತೆ ಲಿವರ್ ಸಹ ಆಚೆ ಬಂದಿದ್ದು, ಸಧ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗು ಜೀವನ್ಮರಣ ಹೋರಾಟದಲ್ಲಿದೆ. ಈ ಹೃದಯವಿದ್ರಾವಕ ದೃಶ್ಯ ಕಂಡು ಕೇಳಿ ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಈ ಕುರಿತು ಸ್ಥಳೀಯ ಪೊಲೀಸರು ಮಾಹಿತಿ ಪಡೆದಿದ್ದಾರೆ.
ಪಾಲಕರೇ ಮಕ್ಕಳ ಮೇಲೆ ಎಚ್ಚರವಿರಲಿ.. ಮಕ್ಕಳ ಜೀವ ಅಮೂಲ್ಯ. ಮಕ್ಕಳಲ್ಲಿ ಪ್ರಾಪಂಚಿಕ ಜ್ಞಾನ ಹೊಂದುವವರೆಗೂ ಇರಲಿ ಹೆಚ್ಚಿನ ಕಾಳಜಿ.!!
ನೆರವು ಕೋರಿಕೆ: ಬಡ ಸಂಗೀತ ಕಲಾವಿದ ಹೊಳೆಯಪ್ಫ ಗುರಿಕಾರ ಅವರು ಮಗಳ ಚಿಕಿತ್ಸೆ ಕೊಡಿಸಲು ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದು, ದಾನಿಗಳು ನೆರವಿಗೆ ಮುಂದೆ ಬರುವಂತೆ ಕೃಷಿಪ್ರಿಯ ಕೋರಿದೆ.
ಫೋನ್ ಪೇ..: 9591169723