ಇಸ್ಪೀಟ್ ಜೂಜಾಟ : ಪೊಲೀಸರು ಮಿಂಚಿನ ದಾಳಿ 9 ಜನ ಬಂಧನ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿ ಕುಂಬಳಾವತಿ ಗ್ರಾಮದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದ ಗುಂಪಿನ ಮೇಲೆ ಬುಧವಾರ ಸಂಜೆ ಪೊಲೀಸರು ದಾಳಿ ನಡೆಸಿ 9 ಜನ ಜೂಜುಕೋರರನ್ನು ಬಂಧಿಸಿ ಅವರ ಬಳಿಯಿದ್ದ 9300 ರೂ. ನಗದು ಹಣ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪೊಲೀಸರು ಮಿಂಚಿನ ದಾಳಿ ಮಾಡಿ ಜೂಜುಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೂಜುಕೋರರು ಅದೇ ಗ್ರಾಮದವರಾಗಿದ್ದು, ಜಾಮೀನು ಪಡೆದು ಬಿಡುಗಡೆ ಮಾಡಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡ ಹನುಮಸಾಗರ ಪೊಲೀಸರು ಮಾಹಿತಿ ನೀಡಿದ್ದಾರೆ.