29 ಕೆ.ಜಿ. ಅಕ್ರಮ ಸ್ಪೋಟಕ ಪಟಾಕಿ ದಾಸ್ತಾನು ಪತ್ತೆ!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮಸಾಗರ ಗ್ರಾಮದಲ್ಲಿ ವಿವಿಧ ಅಂಗಡಿಗಳಿಗೆ ದಾಳಿ ಮಾಡಿದ ಪೊಲೀಸರು ಸುಮಾರು 29 ಕೆ.ಜಿ. ಸ್ಪೋಟಕ ಪಟಾಕಿ ವಸ್ತುಗಳ ದಾಸ್ತಾನು ಗುರುವಾರ ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.

ಹನುಮಸಾಗರ ಗ್ರಾಮ ಪಂಚಾಯಿತಿಯಿಂದ ಯಾವುದೇ ಪರವಾನಗಿ ಪಡೆಯದೇ ಅಕ್ರಮ ಪಟಾಕಿ ದಾಸ್ತಾನು ಮಾಡಿ ಮಾರಾಟ ಮಾಡುತ್ತಿರುವ ಕುರಿತು ಸಾರ್ವಜನಿಕರಿಂದ ಬಂದ ದೂರು ಆಧರಿಸಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೆವೇಂದ್ರಪ್ಪ ಕಮತರ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ನಡೆಸಿ ಗ್ರಾಮದ ರೇಣುಕಾ ಕಿರಾಣಿ ಅಂಗಡಿಯಲ್ಲಿ ಸುಮಾರು 7 ಕೆ.ಜಿ., ವೆಂಕಟೇಶ ಪ್ರಾವಿಜನ್ ಸ್ಟೋರ್ ಅಲ್ಲಿ ಸುಮಾರು 10 ಕೆ.ಜಿ., ವಿರಾಜ್ ಪ್ಯಾನ್ಸಿ ಜನರಲ್ ಸ್ಟೋರ್ ಅಲ್ಲಿ ಸುಮಾರು 12 ಕೆ.ಜಿ.ಯಷ್ಟು ವಿವಿಧ ಬಗೆಯ ಸ್ಪೋಟಕ ಪಟಾಕಿ ವಸ್ತುಗಳನ್ನು ವಶಕ್ಕೆ ಪಡೆದು ಮಾಲೀಕರ ಮೇಲೆ 129-2023 ಕಲಂ 286 ಐಪಿಸಿ ಹಾಗೂ ಕಲಂ 9B(b) ಸ್ಪೋಟಕ ವಸ್ತುಗಳ ಅಧಿನಿಯಮ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿರುವ ಹನುಮಸಾಗರ ಪೊಲೀಸ್ ಠಾಣಾಧಿಕಾರಿಗಳು ಮುಂದಿನ ತನಿಖೆ ಕೈಗೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

ಓದುಗ ದೊರೆಗಳೆ..,: ರಾಜ್ಯದ ಬೆಂಗಳೂರು ಮತ್ತು ನೆರೆ ರಾಜ್ಯ ತಮಿಳುನಾಡಿನಲ್ಲಿ ಪಟಾಕಿ ದಾಸ್ತಾನು ಮಳಿಗೆಗಳಲ್ಲಿ ಬೆಂಕಿ ಅನಾಹುತ ಜರುಗಿ ಹಲವರು ಮೃತರಾದ ಹಿನ್ನೆಲೆ ರಾಜ್ಯ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನತೆಯ ಸುರಕ್ಷತೆಯ ದೃಷ್ಠಿಯಿಂದ ಜನ ವಸತಿ ಪ್ರದೇಶದಲ್ಲಿ ಪಟಾಕಿ, ಸಿಡಿಮದ್ದುಗಳ ಅಕ್ರಮ ದಾಸ್ತಾನು ಪತ್ತೆ ಮಾಡಲು ಸೂಚನೆ ನೀಡಿ’ ಹಸಿರು ಪಟಾಕಿ ಮಾರಾಟ ಮತ್ತು ಬಳಕೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ.