ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದ ಕೇಂದ್ರೀಯ ಸಾರಿಗೆ ಇಲಾಖೆ ಬಸ್ ನಿಲ್ದಾಣದಲ್ಲಿ ಶನಿವಾರ ರಾತ್ರಿ ಅನಾಮದೇಯ ವ್ಯಕ್ತಿಯ ಶವ ಪತ್ತೆಯಾಗಿದೆ.
ಸಾರಿಗೆ ಇಲಾಖೆಯ ವಾಣಿಜ್ಯ ಮಳಿಗೆಯಲ್ಲಿರುವ ಅಪೋಲೋ ಮೆಡಿಕಲ್ ಸ್ಟೋರ್ ಬಳಿ ಈ ವ್ಯಕ್ತಿ ಸಾವನ್ನಪ್ಪಿದ್ದಾನೆ. ಸುಮಾರು 40 ವರ್ಷದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಮೃತ ವ್ಯಕ್ತಿಯು ಬಲಗೈಯಲ್ಲಿ ಕೇಸರಿ ದಾರ ಕಟ್ಟಿರುತ್ತಾನೆ. ಬಿಳಿ ನೈಟ್ ಪ್ಯಾಂಟ್, ಚಾಕಲೇಟ್ ಬಣ್ಣದ ಅಂಡರವೇರ್, ನೀಲಿ ಬಣ್ಣದ ತುಂಬು ತೋಳಿನ ಶರ್ಟ ಧರಿಸಿದ್ದಾನೆ. ಮೃತ ವ್ಯಕ್ತಿಯ ಬಳಿ ಯಾವುದೇ ಗುರುತಿನ ದಾಖಲೆಗಳು ಪತ್ತೆಯಾಗಿಲ್ಲ. ಮೃತದೇಹವನ್ನು ಕುಷ್ಟಗಿ ಸಾರ್ವಜನಿಕ ಆಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ. ಮೃತ ವ್ಯಕ್ತಿಯ ಹೆಸರು, ವಿಳಾಸ ತಿಳಿದುಬಂದಲ್ಲಿ ಕುಷ್ಟಗಿ ಪೊಲೀಸ್ ಠಾಣೆ ಮೊ. ಸಂಖ್ಯೆ 7349071683, ಹಾಗೂ ಪಿಎಸ್ಐ 9480803757 ಸಂಪರ್ಕಿಸಲು ಕೋರಲಾಗಿದೆ.