ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ವಾಯುವಿಹಾರಕ್ಕೆ ತೆರಳಿದ್ದ ವ್ಯಕ್ತಿ ಯೊಬ್ಬನ ಮೇಲೆ ಟಿಪ್ಪರ್ ಲಾರಿಯೊಂದು ಹರಿದು ಸ್ಥಳದಲ್ಲಿ ದುರ್ಮರಣ ಹೊಂದಿದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದ ಹೊರವಲಯದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಸಂಭವಿಸಿದೆ.
ಪಟ್ಟಣದ ಸುಮಾರು 60 ವಯಸ್ಸಿನ ದೊಡ್ಡಪ್ಪ ತಂದೆ ಶಂಕ್ರಪ್ಪ ಕಂಚಿ ಲೋಕೋಪಯೋಗಿ ಇಲಾಖೆ ನಿವೃತ್ತ ನೌಕರ ದುರ್ಮರಣಕ್ಕೀಡಾದ ವ್ಯಕ್ತಿ. ಕೊಪ್ಪಳ ರಸ್ತೆಯಲ್ಲಿ ನಿರ್ಮಾಣ ಹಂತದ ರೈಲ್ವೇ ಹಳಿ ತಿರುವಿನ ಸಮೀಪ ಡಾ.ಅನೂಪ್ ಶೆಟ್ಟಿ ಬಡವಾಣೆ ಬಳಿ ಈ ದುರ್ಘಟನೆ ನಡೆದಿದೆ. ವಾಯುವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ಮರಮ್ ಸಾಗಿಸುವ ಟಿಪ್ಪರ್ ಲಾರಿ ಹರಿದಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪಿಎಸ್’ಐ ಮುದ್ದುರಂಗಸ್ವಾಮಿ ಹಾಗೂ ಸಿಪಿಐ ಯಶವಂತ ಬಿಸನಹಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬೆಳ್ಳಂಬೆಳಗ್ಗೆ ಕೊಪ್ಪಳ ರಸ್ತೆ ಹಾಗೂ ಶಾಖಾಪೂರು ರಸ್ತೆಯ ಕಡೆಗೆ ವಾಯುವಿಹಾರಕ್ಕೆ ತೆರಳುವ ಪಟ್ಟಣದ ಜನತೆಯಲ್ಲಿ ಈ ಘಟನೆ ಬೆಚ್ಚಿಬೀಳಿಸಿದೆ.