ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದ ಹೊರವಲಯದ ಡಿಪ್ಲೋಮಾ ಕಾಲೇಜು ಕೊಠಡಿಯ ಕಿಟಕಿ ಮುರಿದು ಬೆಲೆ ಬಾಳುವ ನಾಲ್ಕು ಕಂಪ್ಯೂಟರ್ ಕಳ್ಳತನವಾದ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ.
ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟೆಂಗುಂಟಿ ಗ್ರಾಮಕ್ಕೆ ತೆರಳುವ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಪಾಲಿಟೆಕ್ನಿಕ್ ಡಿಪ್ಲೊಮಾ ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಮಕ್ಕಳ ತಂತ್ರಜ್ಞಾನ ಬೆಳವಣಿಗೆಗೆ ಅನುಕೂಲವಾಗಲೆಂದು ಇನ್ಫೋಸಿಸ್ ಕಂಪನಿಯಿಂದ ವಿತರಿಸಲಾಗಿದ್ದ ನಾಲ್ಕು ಕಂಪ್ಯೂಟರ್’ಗಳನ್ನು ಕಾಲೇಜು ಹಿಂಭಾಗದಿಂದ ಕೊಠಡಿಯ ಕಿಟಕಿಯ ಸರಳುಗಳನ್ನು ಮುರಿದು ದೋಚಿದ್ದಾರೆ ಎಂದು ಕಾಲೇಜು ಪ್ರಭಾರಿ ಪ್ರಾಂಶುಪಾಲ ರಾಜಶೇಖರ ಬಿ.ಆರ್. ಅವರು ಮಾಹಿತಿ ನೀಡಿದ್ದಾರೆ. ಈ ಕುರಿತು ದೂರು ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.