ಕಚೇರಿ ಧ್ವಾರಬಾಗಿಲು ಗೇಟಿಗೆ ಬಣ್ಣ ಲೇಪಿಸಿ ಗಮನ ಸೆಳೆದ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ನವೆಂಬರ್ 01 ಕನ್ನಡ ರಾಜ್ಯೋತ್ಸವ ಪ್ರಯುಕ್ತ ಕುಷ್ಟಗಿ ಪಟ್ಟಣದ ತಾಲೂಕಾಡಳಿತ ಕಚೇರಿ ಸಿದ್ಧತೆ ನಡೆಸಿದ್ದು, ಕಚೇರಿಯ ಧ್ವಾರಬಾಗಿಲಿಗೆ ಸಿಬ್ಬಂದಿ ಬಣ್ಣ ಲೇಪಿಸುತಿದ್ದ ವೇಳೆ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರು ಸಿಬ್ಬಂದಿಯೊಂದಿಗೆ ಜೊತೆಗೂಡಿ ಬಣ್ಣ ಲೇಪನಕ್ಕೆ ಮುಂದಾಗಿದ್ದು ವಿಶೇಷ.

ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷಗಳು ಪೂರೈಸುವ ಹಿನ್ನೆಲೆ ನವೆಂಬರ್ 01 ಕನ್ನಡ ರಾಜ್ಯೋತ್ಸವವನ್ನು ಹಬ್ಬದ ಸಂಭ್ರಮದಂತೆ ವಿಶೇಷವಾಗಿ ಆಚರಿಸಲು ರಾಜ್ಯ ಸರ್ಕಾರ “ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ” ಎಂಬ ಘೋಷ ವಾಖ್ಯದೊಂದಿಗೆ ನಾಗರಿಕರಲ್ಲಿ ಮನವಿ ಮಾಡಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ತಾಲೂಕಾಡಳಿತ ಪೂರ್ವಸಿದ್ಧತೆ ಕೈಗೊಳ್ಳುತ್ತಿದೆ.

ಅ.28 ಭಾನುವಾರ ರಾತ್ರಿ ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದ ಮುಖ್ಯ ಧ್ವಾರಬಾಗಿಲ ಗೇಟಿಗೆ ಬಣ್ಣ ಲೇಪಿಸಿ ಅಲಂಕಾರ ಗೊಳಿಸಲು ಸೂಚಿಸಲಾಗಿತ್ತು. ಪರಿಶೀಲನೆಗೆ ಎಂದು ಬಂದ ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ್ ಅವರು ಬ್ರಷ್ ಹಿಡಿದು ಸ್ವತಃ ಬಣ್ಣ ಲೇಪಿಸಲು ಮುಂದಾಗಿದ್ದಾರೆ. ತಹಸೀಲ್ದಾರ್ ಅವರ ಕಾರ್ಯವನ್ನು ಸ್ಥಳದಲ್ಲಿದ್ದ ಸ್ಥಳಿಯರು ಮೊಬೈಲ್ ಚಿತ್ರಿಕರಿಸಿ ವೈರಲ್’ ಮಾಡಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.