ಅಲಕ್ಷ್ಯಕ್ಕೊಳಗಾದ ಕನ್ನಡ ಧ್ವಜದ ಕಟ್ಟೆ; ಭಾವುಟಕ್ಕೆ ಅವಮಾನ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ನವೆಂಬರ್ ಒಂದು ಬಂದರೆ ಸಾಕು ನಾಡಿನಾದ್ಯಂತ ಕನ್ನಡಿಗರು ಮತ್ತು ಕನ್ನಡ ಮನಸ್ಸಿನವರು ಭುವನೇಶ್ವರಿ ಭಾವಚಿತ್ರ ಪೂಜಿಸಿ ಕನ್ನಡ ಧ್ವಜಾರೋಹಣ ಮಾಡಿ ನಾಡಗೀತೆಯೊಂದಿಗೆ ಗೌರವ ಸಲ್ಲಿಸುತ್ತಾರೆ. ಆದರೆ, ವರ್ಷ ಪೂರ್ತಿ ನೆಲ, ಜಲ, ನಾಡು, ನುಡಿ ರಕ್ಷಣೆಗೆ ಕಂಕಣಬದ್ದರಾಗಿ ನಿಲ್ಲುತ್ತೇವೆ ಎನ್ನುವ ಕನ್ನಡಪರ ಸಂಘಟನೆಗಳು ಕನ್ನಡ ಮತ್ತು ಕನ್ನಡ ಭಾವುಟವನ್ನು ಎಷ್ಟರ ಮಟ್ಟಿಗೆ ರಕ್ಷಣೆ ಮಾಡುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ..

ಅದರಲ್ಲೂ ರಾಜ್ಯೋತ್ಸವ ದಿನದಂದು ಜಿಲ್ಲೆಯ ಕುಷ್ಟಗಿ ಪಟ್ಟಣದ ಕರವೇ ಸಂಘಟನೆಯ ಬಣವೊಂದು ತೋರಿರುವ ಗೌರವ ಕನ್ನಡಿಗರ ತಲೆ ಎತ್ತುವಂತಿಲ್ಲ. ತಲೆಬಾಗಿಸುವಂತಿದೆ.

ಪಟ್ಟಣದ ರಾಷ್ಟ್ರೀಯ ಚತುಷ್ಪಥ ಹೆದ್ದಾರಿ ಮೇಲ್ಸೇತುವೆ ಅಂಬೇಡ್ಕರ್ ವೃತ್ತದ ಬಳಿ ಇರುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದವರು ನಿರ್ಮಿಸಿದ ಕನ್ನಡದ ಧ್ವಜದ ಕಟ್ಟೆ ಸಂಪೂರ್ಣ ಅಲಕ್ಷ್ಯಕ್ಕೊಳಗಿದೆ. ಈ ಹಿಂದೆ ಈ ಧ್ವಜದ ಕಟ್ಟೆಯನ್ನು ಅಂದಿನ ಶಾಸಕರು, ಮಾಜಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಅವರು ಉದ್ಘಾಟಿಸಿದ್ದರು. ಅಂದು ಹಾರಿಸಿದ ಕನ್ನಡ ಭಾವುಟ ಹರಿದು ಬಣ್ಣ ಮಾಸಿಕೊಂಡು ಇಂದಿಗೂ ಹಾರಾಡುತ್ತಿದೆ. ಆದರೆ, ರಕ್ಷಣಾ ವೇದಿಕೆಯವರು ಎಚ್ಚೆತ್ತು ರಾಜ್ಯೋತ್ಸವ ದಿನದಂದಾದರೂ ಹೊಸ ಭಾವುಟ ಹಾರಿಸಿ ಗೌರವ ಸಲ್ಲಿಸದೇ ಇರುವುದು ಶೋಚನೀಯ. ಇದನ್ನು ಗಮನಿಸಿದ ಕನ್ನಡದ ಮನಸ್ಸುಗಳು ಕರವೇ ಸಂಘಟಕರಿಗೆ ಛೀಮಾರಿ ಹಾಕುತ್ತಿದ್ದಾರೆ.