ಪತ್ರಕರ್ತ ಶರಣಪ್ಪ ಕುಂಬಾರ ಕುಟುಂಬಕ್ಕೆ CM ಪರಿಹಾರ ನಿಧಿಯಿಂದ ₹2 ಲಕ್ಷ ಮಂಜೂರು

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಕೃಷಿಪ್ರಿಯ ಪತ್ರಿಕೆ ಸಂಸ್ಥಾಪಕ ಸಂಪಾದಕ ದಿ.ಶರಣಪ್ಪ ಕುಂಬಾರ ಅವರ ಕುಟುಂಬಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು CM ಪರಿಹಾರ ನಿಧಿಯಿಂದ ದಿನಾಂಕ 13-10-2023 ರಂದು ₹2 ಲಕ್ಷ ಪರಿಹಾರ ಮಂಜೂರು ಮಾಡಿದ್ದಾರೆ.

ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನಮನಾಳ ಗ್ರಾಮದ  ಶರಣಪ್ಪ ಕುಂಬಾರ ರವರು ಕುಷ್ಟಗಿಯಲ್ಲಿ ಪತ್ರಕರ್ತರಾಗಿ, ರಾಜ್ಯ ಮಟ್ಟದ ಪತ್ರಿಕೆಗಳು ಹಾಗೂ ನ್ಯೂಸ್ ವಾಹಿನಿಗಳಲ್ಲಿ ಸುಮಾರು 20 ವರ್ಷಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದ ಅವರು ದಿನಾಂಕ 05.07.2023ರಂದು ಅನಾರೋಗ್ಯದ ನಿಮಿತ್ತ ಮೃತಪಟ್ಟ ಹಿನ್ನಲೆಯಲ್ಲಿ ಅವರ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿತ್ತು. ಪುತ್ರನ ವಿದ್ಯಾಭ್ಯಾಸದ ಅನುಕೂಲಕ್ಕಾಗಿ ಸರ್ಕಾರದಿಂದ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕೆಂದು ಮಾಜಿ ಶಾಸಕ ಅಮರೇಗೌಡ ಎಲ್.ಪಾಟೀಲ್‌ ಬಯ್ಯಾಪುರ ಅವರು ಮನವಿ ಮಾಡಿದ್ದರು. ಬಯ್ಯಾಪೂರು ಅವರ ಮನವಿ ಮೇರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಹಾರ ಮಂಜೂರು ಮಾಡಿದ್ದಾರೆ.

ಪರಿಹಾರ ಮಂಜೂರು ಮಾಡಲು ಆದೇಶಿಸಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಹಾಗೂ ಪರಿಹಾರ ಮಂಜೂರಿಗೆ ಕಾರಣೀಭೂತರಾದ ಮಾಜಿ ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರು ಅವರಿಗೆ ಹಾಗೂ ಶಾಸಕ ದೊಡ್ಡನಗೌಡ ಎಚ್.ಪಾಟೀಲ್ ಅವರಿಗೆ ಮತ್ತು ಕುಷ್ಟಗಿ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಕೊಪ್ಪಳ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘವು ಮತ್ತು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಘಟಕಕ್ಕೆ “ಕೃಷಿಪ್ರಿಯ” ಪತ್ರಿಕೆ ಸಂಸ್ಥಾಪಕ ಸಂಪಾದಕ ದಿ.ಶರಣಪ್ಪ ಕುಂಬಾರ ಅವರ ಕುಟುಂಬ ಹಾಗೂ ಪತ್ರಿಕೆ ಬಳಗ ಕೃತಜ್ಞತೆಗಳನ್ನು ಸಲ್ಲಿಸಿದೆ.