ಕುಷ್ಟಗಿಯಲ್ಲಿ ಪಂಡರಾಪೂರ ದಿಂಡಿ ಯಾತ್ರಿಕರಿಗೆ ಭವ್ಯ ಸ್ವಾಗತ, ಪೂಜೆ, ಗೌರವ

ಶರಣು ಚೆನ್ನದಾಸರ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಬಳ್ಳಾರಿ ಜಿಲ್ಲೆಯ ಎಮ್ಮಿಗನೂರು ಗ್ರಾಮದ ಸಂತರ ನೇತೃತ್ವದಲ್ಲಿ ಶ್ರೀಕ್ಷೇತ್ರ ಪಂಡರಾಪೂರ ಕಡೆಗೆ ಬೆಳೆಸಿದ್ದ ಪಾದಯಾತ್ರೆ ದಿಂಡಿಗೆ ಶುಕ್ರವಾರ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಭಕ್ತರು ಭವ್ಯ ಸ್ವಾಗತಕೋರಿದರು.

ಬಳ್ಳಾರಿ ಜಿಲ್ಲೆಯ ಎಮ್ಮಿಗನೂರು ನಗರದ ಶ್ರೀರಾಮಲಿಂಗೇಶ್ವರ ದೇವಸ್ಥಾನದಿಂದ ಶಾಂತಾಬಾಯಿ ಮಠದ 13ನೇ ಸಂವತ್ಸರ ಕಾರ್ತಿಕ ದೀಪೋತ್ಸವ ನಿಮಿತ್ತ ಹಮ್ಮಿಕೊಂಡ ಪಂಡರಾಪೂರ ಸುಕ್ಷೇತ್ರದ 30ನೇ ವರ್ಷದ ಪಾದಯಾತ್ರೆ ತಾಲೂಕಿನ ಕಂದಕೂರು ಗ್ರಾಮದ ಮೂಲಕ ಪಟ್ಟಣಕ್ಕೆ ಬೆಳಿಗ್ಗೆ ಆಗಮಿಸಿತು. ಪಟ್ಟಣದ ನಿವಾಸಿ ದಿ.ಬಸಪ್ಪ ನಿಲೋಗಲ್ ಕುಟುಂಬಸ್ಥರು ಹಾಗೂ ಊರಿನ ನಾಗರಿಕರು ದಿಂಡಿ ಯಾತ್ರೆಯನ್ನು ಭಕ್ತಿ ಗೌರವ ಮೂಲಕ ಬರಮಾಡಿಕೊಂಡರು.

ಪ್ರತಿ ವರ್ಷದಂತೆ ಈ ವರ್ಷವೂ ನಿಲೋಗಲ್ ವಾಣಿಜ್ಯ ಸಂಕೀರ್ಣದಲ್ಲಿ ಶ್ರೀಪಾಂಡುರಂಗ ವಿಠ್ಠಲ ಹಾಗೂ ಮಾತೆ ರುಕ್ಮಿಣಿ ಸ್ವರೂಪದ ತಂಬೂರಿ ಮತ್ತು ತುಳಸಿ ಕಟ್ಟೆಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಕುಟುಂಬ ಸಮೇತ ಊರಿನ ಗಣ್ಯರು ಭಕ್ತಿ ಗೌರವ ಸಮರ್ಪಿಸಿದರು. ಬಳಿಕ ಒಂದು ಗಂಟೆಗೂ ಹೆಚ್ಚು ಕಾಲ ಪಂಡರಾಪೂರ ಯಾತ್ರಿಕರಿಂದ ತಾಳ, ಮೃದಂಗ ನುಡಿಸುವುದರ ಮೂಲಕ ಪಾಂಡುರಂಗ ವಿಠ್ಠಲ – ರುಕ್ಮಿಣಿ ನಾಮಸ್ಮರಣೆಯ ಭಕ್ತಿಗೀತೆಗಳು ಒಳಗೊಂಡ ಭಜನೆ ನಡೆಯಿತು. ಬಳಿಕ ಯಾತ್ರಿಕರು ಹಾಗೂ ಸ್ಥಳೀಯ ನಾಗರಿಕರಿಗೆ ಅನ್ನಸಂತರ್ಪಣೆ ಸಲ್ಲಿಸಲಾಯಿತು.

ನಂತರ ಹಳೆಯ ಬಜಾರಿನ ವಿಠ್ಠೋಬ ದೇವರ ಮಂದಿರದಲ್ಲಿ ಪಂಡರಾಪೂರ ದಿಂಡಿ ಯಾತ್ರಿಕರು ದೀಪ ಬೆಳಗಿ ವಿಶೇಷ ಪೂಜೆ ಹಾಗೂ ಸಾಮೂಹಿಕ ಭಜನೆ ಮಾಡಿ ಭಕ್ತಿ ಸಮರ್ಪಿಸಿದರು. ನಂತರ ಊರಿನ ನಾಗರಿಕರು ಪಂಡರಾಪೂರ ದಿಂಡಿ ಯಾತ್ರಿಕರನ್ನು ಬೀಳ್ಕೊಡಲಾಯಿತು.

ಈ ವೇಳೆ ದಿಂಡಿಗೆ ಸೇವಕ ಎಮ್ಮಿಗನೂರು ಜಿ.ಶಿವಾರೆಡ್ಡಿ, ವೀಣಾಕರಿ ಕುಡತಿನಿ ನರಸಿಂಹಪ್ಪ, ಕುರುಗೋಡು ಜಡಪ್ಪ, ಕುರುಗೋಡು ಮುನ್ನೂರಪ್ಪ, ಸಂಚಾಲಕ ಕಣಿವೆ ತಿಮ್ಮಲಾಪುರ ಕೃಷ್ಣಪ್ಪ, ಲಕ್ಷ್ಮೀಪುರ ವೆಂಕಟೇಶ, ಹವಾಲ್ದಾರರಾದ ಕುರುಗೋಡು ಜಲಾಲಿ,
ಲಕ್ಷ್ಮೀಪುರ ತಿಪ್ಪಣ್ಣ, ಉಪನ್ಯಾಸಕ ಡಾ. ದತ್ತಾತ್ರೆಯ ಕುಲಕರ್ಣಿ, ಕುರುಗೋಡು ಗಾದಿಲಿಂಗಪ್ಪ, ಕೋಡಾಲು ಮಂಜುನಾಥ, ಬಸಪ್ಪ ಚಿಕ್ಕಂತಾಪುರ, 
ಹಿರಿಯ ನ್ಯಾಯವಾದಿ ಪ್ರಭುರಾಜ ನಿಲೋಗಲ್, ಪತ್ರಕರ್ತ ಮುಕೇಶ ನಿಲೋಗಲ್, ಮಹಾದೇವಪ್ಪ ಮಂಗಳಗುಡ್ಡ, ಸಮಾಜ ಸೇವಕ ನೀಲಕಂಠಬಾಬು ನಿಲೋಗಲ್, ಅಮೃತರಾಜ ಜ್ಞಾನಮೋಟೆ, ಪತ್ರಕರ್ತರರಾದ ಮಲ್ಲಿಕಾರ್ಜುನ ಮೆದಿಕೇರಿ, ಪರಶಿವಮೂರ್ತಿ ಮಾಟಲದಿನ್ನಿ, ಸಂಗೀತ ಶಿಕ್ಷಕ ಹನುಮಂತಕುಮಾರ ಪಂಡಿತ ನಿಂಗಲಬಂಡಿ, ಮಾರುತಿ ಹಲಗಿ, ಬಸವರಾಜ ನಿಲೋಗಲ್, ಶಾಂತರಾಜ ಹಡಪದ, ಶರಣು ಚೆನ್ನದಾಸರ ಸೇರಿದಂತೆ ಪಾಂಡುರಂಗ ಅಪಾರ ಸಂಖ್ಯೆಯ ಭಕ್ತರು ಈ ವೇಳೆ ಹಾಜರಿದ್ದರು.