ಸಿದ್ಧರಾಮಯ್ಯ ಸ್ಥಾನಕ್ಕಾಗಿ ಇನ್ನೊಂದು ಪಕ್ಷಕ್ಕೆ ಹಾರೋಗೊ ಮಂಗ : ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಸಿದ್ದರಾಮಯ್ಯ ದೇವೆಗೌಡರಿಗೆ ಮೊಸಮಾಡಿ ಆ ಪಕ್ಷದಿಂದ ಹಾರಿ ಕಾಂಗ್ರೆಸ್’ಗೆ ಬಂದಿದ್ದಾರೆ. ಈಗಿರೋ ಮುಖ್ಯಮಂತ್ರಿ ಸ್ಥಾನವನ್ನು ತೆಗೆದು ಡಿಕೆ ಶಿವಕುಮಾರಗೋ ಇನ್ನೊಬ್ಬರಿಗೋ ಕೊಡ್ತೀನಿ ಎಂದರೆ, ಇನ್ನೊಂದು ಪಕ್ಷದಲ್ಲಿ ಸ್ಥಾನ ಸಿಗುತ್ತೆಂದರೆ ಅಲ್ಲಿಗೆ ಹಾರೋಗುವಂತ ಮಂಗ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.

ಅವರು, ಜಿಲ್ಲೆಯ ಕುಷ್ಟಗಿ ಪಟ್ಟಣಕ್ಕೆ ಮಂಗಳವಾರ ಭೇಟಿ ನೀಡಿ ಸುದ್ದಿಗೋಷ್ಠಿ ನಡೆಸಿದ ಸಂದರ್ಭದಲ್ಲಿ ಈಶ್ವರಪ್ಪ ಅವರು ಸವಕಲು ನಾಣ್ಯ ಅವರಿಗೆ ಬೆಲೆಯಿಲ್ಲ. ಹಾಗಾಗಿ ಅವರಿಗೆ ಬಿಜೆಪಿ ಟಿಕೇಟ್ ಕೊಡಲಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ ಎಂಬ ಪ್ರಶ್ನೆಗೆ ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಯಲ್ಲಿ ಕಿಡಿಕಾರಿದರು.

ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದೇನೆ. ಈ ಬಾರಿ ಚುನಾವಣೆಯಲ್ಲಿ ಸ್ಪರ್ದಿಸದೆ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳಿ ಎಂದು ಪಕ್ಷದ ನಾಯಕರು ಹೇಳಿದ ಅರ್ಧಗಂಟೆಯೊಳಗೆ ಯೋಚನೆಮಾಡಿ ಪತ್ರ ಬರೆದು ಕಳುಹಿಸಿದ್ದೇನೆ. ಆದರೆ, ರಾಜ್ಯ ಕಾಂಗ್ರೆಸ್ ನಾಯಕರಲ್ಲಿ ಮುಖ್ಯಮಂತ್ರಿ ಸ್ಥಾನ ವಿಷಯವಾಗಿ ಯಾರೂ ಕೂಡಾ ಬೀದಿಗಿಳಿದು ಹೇಳಿಕೆಕೊಡಬಾರದು, ಹೇಳಿಕೆ ಕೊಟ್ಟರೆ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳಲಾಗುವದು ಎಂದು ದೆಹಲಿಯಿಂದ ಆಗಮಿಸಿದ ಕಾಂಗ್ರೆಸ್ ಪಕ್ಷದ ಸುರ್ಜೆವಾಲ ಮತ್ತು ವೇಣುಗೋಪಾಲ ಅವರು ಹೇಳಿದ ಮಾರನೇ ದಿನವೇ ಸಿದ್ದರಾಮಯ್ಯ ಅವರು ಮುಂದಿನ ಐದುವರ್ಷ ನಾನೇ ಮುಖ್ಯಮಂತ್ರಿ ಎಂದು ಹೇಳಿಕೆ ನೀಡಿದ್ದಾರೆ. ಲೂಟಿ ಹೊಡೆಯೊದಕೋಸ್ಕರ ಅಧಿಕಾರದಲ್ಲಿರುವ ಲೂಟಿಕೋರನಿಗೆ ತಮ್ಮನ್ನು ಹೋಲಿಸಬೇಡಿ ಎಂದರು.

ಸಿದ್ಧರಾಮಯ್ಯತರ ಆ ಪಾರ್ಟಿ ಈ ಪಾರ್ಟಿ ಹಾರೋ ವ್ಯಕ್ತಿನಾನಲ್ಲ. ಒಂದು ಪಾರ್ಟಿಯಿಂದ ಇನ್ನೊಂದು ಪೋರ್ಟಿಗೆ ಮಂಗ ಹಾರುತ್ತೆ ಎಂದು ವ್ಯಂಗ್ಯವಾಡಿದ ಅವರು, ಸಿದ್ದರಾಮಯ್ಯ ದೇವೆಗೌಡರಿಗೆ ಮೊಸಮಾಡಿ ಆ ಪಕ್ಷದಿಂದ ಹಾರಿ ಕಾಂಗ್ರೆಸ್ ಪಕ್ಷಕ್ಕೆ ಬಂದಿದ್ದಾರೆ. ಈಗಿರೋ ಮುಖ್ಯಮಂತ್ರಿ ಸ್ಥಾನ ತೆಗೆದು ಡಿಕೆ ಶಿವಕುಮಾರಗೋ ಇನ್ನಾರಿಗೋ ಕೊಡ್ತೀನಿ ಎಂದರೆ, ಸಿದ್ದರಾಮಯ್ಯ ಇನ್ನೊಂದು ಪಕ್ಷದಲ್ಲಿ ಸ್ಥಾನ ಸಿಗುವುದಾದರೆ ಅಲ್ಲಿಗೆ ಹಾರೋಗುವ ಮಂಗವಿದು. ಆ ಮಂಗಗೆ ನನ್ನಬಗ್ಗೆ ಮಾತನಾಡುವ ಅಧಿಕಾರ ಏನಿದೆ ಎಂದು ಪ್ರಶ್ನಿಸಿದರು, ರಾಜಕಾರಣ ಶುರುಮಾಡಿದ್ದು ನಾನು ಬಿಜಿಪಿಯಿಂದಲೇ, ಬಿಜೆಪಿ ನಂಗೆ ತಾಯಿಯಿದ್ದಹಾಗೆ, ಸಾಯೋವರೆಗೂ ಇದೇ ಪಕ್ಷದಲ್ಲಿರುವೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ತಿರುಗೇಟು ನೀಡಿದರು.

ರಾಜ್ಯದಲ್ಲಿ ತೀವ್ರ ಬರಗಾಲ ಆವರಿಸಿ ರೈತರು ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಕೇಂದ್ರದ ಬರ ಅಧ್ಯಯನ ತಂಡ ರಾಜ್ಯಕ್ಕೆ ಭೇಟಿ ನೀಡಿ ಬರಪೀಡಿತ ಪ್ರದೇಶಗಳಿಗೆ ತೆರಳಿ ವಾಸ್ತವ ವರದಿ ಪಡೆದು ಹೋಗಿದೆ. ಆದರೆ, ರಾಜ್ಯ ಸರ್ಕಾರದ ಸಚಿವರು, ಶಾಸಕರು ಈವರೆಗೂ ರೈತರ ಜಮೀನುಗಳಿಗೆ ಭೇಟಿ ನೀಡಿಲ್ಲ. ಕೇವಲ ಇಲಾಖೆ ಅಧಿಕಾರಿಗಳ ಸಭೆ ನಡೆಸಿ ಬರದ ವರದಿ ಪಡೆದ ರಾಜ್ಯ ಸರ್ಕಾರ ಕೇಂದ್ರಕ್ಕೆ ಕಳೂಹಿಸಿದೆ. ಕೇಂದ್ರ ತಂಡದ ವರದಿ ಹಾಗೂ ರಾಜ್ಯ ಸರ್ಕಾರ ಕಳುಹಿಸಿದ ವರದಿ ಒಂದಕ್ಕೊಂದು ಸಾಟಿಯಾಗುತ್ತಿಲ್ಲ. ರಾಜ್ಯ ಸರ್ಕಾರ ಮೊದಲು ಬರ ಪರಿಹಾರ ನೀಡಿ ಬಳಿಕ ಕೇಂದ್ರಕ್ಕೆ ಪರಿಹಾರ ಬೇಡಿಕೆ ಸಲ್ಲಿಸದೇ ಕೇಂದ್ರ ಸರ್ಕಾರ ಹಣ ನೀಡುತ್ತಿಲ್ಲ ಎಂದು ಮೋದಿ ಅವರಿಗೆ ಆಪಾದನೆ ಮಾಡುವ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ ಎಂದರು.

ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಎಲ್ಲಾ ಜಿಲ್ಲೆಗಳ ಉಸ್ತುವಾರಿ ಸಚಿವರುಗಳನ್ನು, ಶಾಸಕರಾದಿಯಾಗಿ ಖುದ್ದು ರೈತರ ಜಮೀನುಗಳಿಗೆ ಕಳುಹಿಸಿ ವಾಸ್ತವ ವರದಿ ಪಡೆದುಕೊಂಡು ರೈತರಿಗೆ SDRFನಡಿ ಇಂತಿಷ್ಟು ಪರಿಹಾರ ನೀಡಿದ್ದೇವೆ ಎಂದು ಕೇಂದ್ರಕ್ಕೆ ವರದಿ ಕಳುಹಿಸಲಿ. ಕೇಂದ್ರ ಸರ್ಕಾರಕ್ಕೆ ನಾವು ಕೂಡಾ ಒತ್ತಾಯಮಾಡಿ NDRFನಡಿ ಹಣ ಬಿಡುಗಡೆ ಮಾಡಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು.

370 ಕೋಟಿ ರೂ. ಬರ ಪರಿಹಾರ ಮಂಜೂರು ಮಾಡಲಾಗಿದೆ ಎಂಬ ಘೋಷಣೆ ಕೇವಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹೊರತು ಈವರೆಗೂ ಒಂದು ರೂಪಾಯಿ ಕೂಡಾ ಜಿಲ್ಲಾಧಿಕಾರಿಗಳ ಖಾತೆಗೆ ಬಂದಿಲ್ಲ. ಪ್ರತಿಯೊಬ್ಬ ಶಾಸಕರ ಖಾತೆಗೆ 50 ಲಕ್ಷ ರೂ. ಹಾಕಲಾಗಿದೆ ಎಂದು ಪತ್ರಿಕೆಯಲ್ಲಿ ಬಂದಿದೆ. ಆದರೆ, ಒಂದು ರೂಪಾಯಿ ಕೂಡಾ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಯಾವ ಶಾಸಕರಿಗೂ ಬಂದಿಲ್ಲ. ಬೆಳೆ ಕಳೆದುಕೊಂಡ ರೈತರು ಪರಿಹಾರ ಸಿಗದೇ ನಗರ ಪ್ರದೇಶಗಳತ್ತ ಗುಳೇ ಹೊರಟಿದ್ದಾರೆ. ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದ ಸಿದ್ಧರಾಮಯ್ಯ ಆಡಳಿತ ಮುಗಿದ ಮೇಲೆ ಮುಂದೆ ತುಘಲಕ್ ಸರ್ಕಾರ ಎಂಬ ಹೆಸರು ಹೇಗೆ ಉಳಿಯಿತೋ ಹಾಗೇ ಸುಳ್ಳುರಾಮಯ್ಯ ಎಂಬ ಹೆಸರು ಉಳಿಯುವಂತೆ ಆಗಬಾರದು ಎಂದರು.

ಡಾ.ಬಿ.ಆರ್. ಅಂಬೇಡ್ಕರ್, ದೇವರಾಜ ಅರಸು ಅವರನ್ನು ಬಿಟ್ಟರೆ ಹಿಂದುಳಿದೋರು, ದಲಿತರ ಉದ್ಧಾರಕ ನಾನೇ ಎಂದು ಸ್ವಯಂಘೋಷಿತ ನಾಯಕ ಎಂದು ದೊಡ್ಡ ದೊಡ್ಡ ಕಟ್ಟೌಟ ಹಾಕಿಕೊಳ್ಳುವ ಮೂಲಕ ಬಿಂಬಿಸಿಕೊಳ್ಳಲು ಹೊರಟಿರುವ ಸಿಎಂ ಸಿದ್ದರಾಮಯ್ಯ, ಈವರೆಗೂ ರಾಜ್ಯದಲ್ಲಿ ಹಿಂದುಳಿದ ವರ್ಗಗಳು, ದಲಿತ ಸಮುದಾಯಕ್ಕೂ ಹಾಗೂ ಯಾವ ಹಿಂದುಳಿದ ವರ್ಗದ ಮಠಾಧೀಶರಿಗೂ ಹಣ ನೀಡಿಲ್ಲ ಎಂದರು.

ಬಿಜೆಪಿ ಮೇಲೆ 40% ಭ್ರಷ್ಟಾಚಾರ ಸರ್ಕಾರ ಎಂದು ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್’ ತಮ್ಮ ಸರ್ಕಾರ ಇದೆ ಆರೋಪ ಸಾಬೀತು ಮಾಡಲು ಸಿಬಿಐ, ಎನ್’ಐಗೆ ಏಕೆ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಡಿಸಿಎಂ ಡಿಕೆಶಿ ಹೆಸರೇಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಇಂಜಿನಿಯರ್ ಕಮಿಷನ್ ಪಡೆಯುತ್ತಿರುವ ಕುರಿತು ಕೆಂಪಣ್ಣ ಎಂಬುವರು ಮಾಡಿರುವ ಆರೋಪ ಪತ್ರಿಕೆಯಲ್ಲಿ ಪ್ರಕಟವಾದರೂ ಸಿದ್ದರಾಮಯ್ಯ, ಡಿಕೆಶಿ ತುಟಿಬಿಚ್ಚುತ್ತಿಲ್ಲ ಏಕೆ? ಆರೋಪಿಸಿದವರ ಮೇಲೆ ಹಾಲಿ ಜಸ್ಟೀಸ್ ಅಥವಾ ನಿವೃತ್ತ ಜಸ್ಟೀಸ್’ಗೆವಹಿಸಿ ತನಿಖೆ ನಡೆಸದೆ ಸುಮ್ಮನೆ ಕುಳಿತಿರುವುದೇಕೆ ಎಂದು ಪ್ರಶ್ನಿಸಿದರು. ರಾಜ್ಯದ ಜನರಿಗೆ ಮೋಸಮೋಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಐದು ಗ್ಯಾರಂಟಿ ಈಡೇರಿಸುವಲ್ಲಿ ರಾಜ್ಯದ ತೆರಿಗೆ ಹಣ ಗ್ಯಾರಂಟಿಗಳಿಗೆ ತುಂಬಿದರೂ ಯೋಜನೆಗಳು ಯಶಸ್ವಿಯಾಗಿಲ್ಲ. ಮುಂದೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವದಿಲ್ಲ ಎಂದು ಅವರಿಗೆ ಖಚಿತವಾಗಿದ್ದು, ಎಷ್ಟುಬೇಕೋ ಅಷ್ಟು ಲೂಟಿಹೊಡೆಯುತಿದ್ದಾರೆ ಎಂದು ಮಾಜಿ ಸಚಿವ ಈಶ್ವರಪ್ಪ ಆರೋಪಿಸಿದರು.

ಈ ವೇಳೆ ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಎಚ್.ಪಾಟೀಲ್, ಶಾಸಕಿ ಹೇಮಲತಾ ನಾಯಕ, ಮಾಜಿ ಸಚಿವ ಹಾಲಪ್ಪ ಆಚಾರ, ಮಾಜಿ ಶಾಸಕರಾದ ಗಂಗಾವತಿಯ ಪರಣ್ಣ ಮನವಳ್ಳಿ, ಕನಕಗಿರಿ ಬಸವರಾಜ ದಡೇಸಗೂರು, ಜಿ.ಪಂ.ಮಾಜಿ ಸದಸ್ಯ ಕೆ.ಮಹೇಶ, ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಹಳ್ಳೂರು, ಜಿಲ್ಲಾ ಉಪಾಧ್ಯಕ್ಷ ತುಕಾರಾಮ ಸುರ್ವೆ, ಮುಖಂಡ ಮಲ್ಲಣ್ಣ ಪಲ್ಲೇದ, ಕಾರ್ಯದರ್ಶಿ ಚಂದ್ರಕಾಂತ ವಡ್ಡಿಗೇರಿ ಸೇರಿದಂತೆ ಪಕ್ಷದ ಕಾರ್ಯಕರ್ತರು ಇದ್ದರು.