ರಾಷ್ಟ್ರೀಯ ಸೇವಾಯೋಜನೆ ಘಟಕದ ವಾರ್ಷಿಕ ವಿಶೇಷ ಶಿಬಿರಕ್ಕೆ ಚಾಲನೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದ ಶ್ರೀ ಪಾಂಡುರಂಗ ವಿಠ್ಠಲ ದೇವಸ್ಥಾನದ ಪ್ರಾಂಗಣದಲ್ಲಿ ಬುಧವಾರ ದಿನ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ರಾಷ್ಟ್ರೀಯ ಸೇವಾಯೋಜನೆ ಘಟಕದಿಂದ ನವೆಂಬರ್ 15 ರಿಂದ 21 ರ ವರೆಗೆ ನಡೆಯುವ 2023-24ನೇ ಸಾಲಿನ ವಾರ್ಷಿಕ ವಿಶೇಷ ಶಿಬಿರಕ್ಕೆ ವಿಜಯ ವಿಠ್ಠಲ ವಿದ್ಯಾಮಂದಿರ ಆಡಳಿತ ಮಂಡಳಿ ಅಧ್ಯಕ್ಷ ಸಂತ ಮಹಾರಾಜ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ಇಂದಿನ ಯುವ ಪೀಳಿಗೆಗೆ ತಾಳ್ಮೆ ಬಹುಮುಖ್ಯ, ಏನೆ ಕೆಲಸ ಮಾಡಿದರೂ ತತ್’ಕ್ಷಣ ಫಲಿತಾಂಶ ಬಯಸುತ್ತಾರೆ. ಶೀಘ್ರ ಪ್ರತಿಫಲ ದೊರೆಯದಿದ್ದರೆ ಮತ್ತೊಂದು ಕೆಲಸಕ್ಕೆ ಕೈ ಹಾಕುತ್ತಾರೆ. ಇದರಿಂದ ಯಶಸ್ಸು, ಗುರಿ ತಲುಪಲು ಆಗುವುದಿಲ್ಲ. ಕೆಲಸದಲ್ಲಿ ಒಮ್ಮೆ ಸೋಲಾದರೆ ಅಷ್ಟಕ್ಕೇ ಗುರಿಯನ್ನು ಬದಲಿಸದೇ ದೃಢ ನಂಬಿಕೆಯಿಂದ ನಿರಂತರ ಪ್ರಯತ್ನಪಟ್ಟರೆ, ಯಶಸ್ಸು ಗುರಿ ತಲುಪಲು ಸಾಧ್ಯ. ಹಾಗಾಗಿ ಬದುಕಿನಲ್ಲಿ ನಂಬಿಕೆ, ತಾಳ್ಮೆ ಬಹಳ ಮುಖ್ಯ ಎಂದರು.

ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ 3ನೇ ವಾರ್ಡ ರಹವಾಸಿಗಳ ಸಂಘದ ಅಧ್ಯಕ್ಷ ಡಿ. ಬಿ ಗಡಾದ ಅವರು ಮಾತನಾಡಿ, ರಾಷ್ಟ್ರೀಯ ಸೇವಾಯೋಜನೆ ಮಹತ್ವ ಅದರಿಂದಾಗುವ ವಿಧ್ಯಾರ್ಥಿಗಳ ಬದಲಾವಣೆ ಬಗ್ಗೆ ಮಾತನಾಡಿ, ರಾಷ್ಟ್ರದ ಭಕ್ತಿ ಹಾಗೂ ಸ್ವಚ್ಛತೆಗೆ ಇಂತಹ ಕಾರ್ಯಕ್ರಮಗಳು ಬಹಳ ಉತ್ತೇಜನ ಎಂದರು.

ಮಾತೋಶ್ರೀ ಯಲ್ಲಮ್ಮನವರು ಧ್ವಜಾರೋಹಣ ನೇರವೇರಿಸಿದರು. ಪ್ರಾಚಾರ್ಯ ಮಾಲಾ ಪಿ. ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಘಟಕಾಧಿಕಾರಿ ಡಾ. ನಾಗರಾಜ ಹೀರಾ ರವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಲರಾಮ ಜೋಷಿಯವರು ಬೋಧನಾವಿಧಿ ಬೋಧಿಸಿದರು.

ವಿಜಯವಿಠಲ ವಿದ್ಯಾಮಂದಿರದ ಮುಖ್ಯ ಗುರುಗಳು, ಶಿಕ್ಷಕರು ಭಾಗವಹಿಸಿದ್ದರು. ಮಲ್ಲಿಕಾರ್ಜುನ ಕಾರ್ಯಕ್ರಮ ನಿರೂಪಿಸಿದರು. ಈ ವೇಳೆ ರಾಷ್ಟ್ರೀಯ ಸೇವಾಯೋಜನೆ ಸ್ವಯಂ ಸೇವಕರು ಶ್ರಮದಾನ ಹಾಗೂ ಸ್ವಚ್ಛತೆ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.