ಪಾಕಿಸ್ತಾನ ಧ್ವಜ ಮೊಬೈಲ್ ಸ್ಟೇಟಸ್ ಇಟ್ಟುಕೊಂಡ ಪ್ರಕರಣ ; ಸ್ಟೇಟಸ್ ಎಡಿಟ್ ಮಾಡಿದವನ ಬಂಧನ!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಮುಸ್ಲಿಂ ಯುವಕನೋರ್ವ ಸಾಮಾಜಿಕ ಜಾಲತಾಣ ಮೊಬೈಲ್ ಸ್ಟೇಟಸಲ್ಲಿ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮುಸ್ಲಿಂ ಬಾಧವರಿಗೆ ಆಹ್ವಾನ ನೀಡಿದ್ದ ದೃಶ್ಯಕ್ಕೆ ಇನ್ನೋರ್ವ ಮುಸ್ಲಿಂ ಯುವಕ ವಿಡಿಯೋ ಸ್ಕ್ರೀನ್ ಶಾಟ್ ತೆಗೆದು ಎಡಿಟ್ ಮಾಡಿ ಪಾಕಿಸ್ತಾನ ಧ್ವಜ ಟ್ಯಾಗ್ ಮಾಡಿ ಹಂಚಿಕೊಂಡಿದ್ದು, ಪೊಲೀಸ್ ತನಿಖೆಯ ನಂತರ ತಿಳಿದುಬಂದಿದೆ.

ಸ್ಟೇಟಸಲ್ಲಿ ಹರಿದಾಡಿದ ಫೋಟೋದಲ್ಲಿರುವ ಯುವಕ ಶ್ಯಾಮೀದಸಾಬ ಎಂಬುವನನ್ನು ಪೊಲೀಸರು ಬಿಟ್ಟು ಕಳುಹಿಸಿದ್ದಾರೆ. ವೀಡಿಯೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಯುವಕ ರಾಜೇಸಾಬ್ ತಂದೆ ಮಹ್ಮದ್ ಸಾಬ್ ನಾಯಕ ನನ್ನ ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಸಿಪಿಐ ಯಶವಂತ ಬಿಸನಳ್ಳಿ ಅವರು ಇಂದು ಮಾಧ್ಯಮಕ್ಕೆ ಸ್ಪಷ್ಟಪಡಿಸಿದ್ದಾರೆ.

ಈ ಕುರಿತು ತಾವರಗೇರಾ ಪಟ್ಟಣದ ಕೆಲ ಸಂಘಟನೆಗಳ ಪ್ರಮುಖರು ಯುವಕ ಶ್ಯಾಮೀದಸಾಬ ಈತನದು ಏನೂ ತಪ್ಪಿಲ್ಲ ಈತನಮೇಲಿನ ಆರೋಪ ಸುಳ್ಳು. ಎಡಿಟ್ ಮಾಡಿ ಫೋಟೋ ಹರಿಬಿಟ್ಟಿದ್ದ ರಾಜೇಸಾಬ್ ಎಂಬಾತನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ ಎಂದು ಮಾಧ್ಯಮ ಮೂಲಕ ತಿಳಿಸಿದ್ದಾರೆ.