ಕೃಷಿಪ್ರಿಯ ವಾರ್ತೆ
ಕೊಪ್ಪಳ: ಹನಮನಾಳ ಗ್ರಾಮ ಹಾಲುಮತ ಸಮುದಾಯದ ಹಿರಿಯ ಜೀವ ಶೀಮತಿ ಪಾರ್ವತಮ್ಮ ಗಂಡ ಸಿದ್ದಪ್ಪ ಬಾಗಲಿ(94) ಸ್ವಗ್ರಾಮದ ನಿವಾಸದಲ್ಲಿ ಶನಿವಾರ ಮಧ್ಯಾಹ್ನ 2.30ರ ಸುಮಾರಿಗೆ ನಿಧನರಾಗಿದ್ದಾರೆ.
ಮೃತರು, ಮೂವರು ಪುತ್ರಿಯರು ಹಾಗೂ ಐವರು ಪುತ್ರರು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ಭಾನುವಾರ(ನ.26) ಮಧ್ಯಾಹ್ನ 3 ಗಂಟೆ ಸುಮಾರಿಗೆ ಗ್ರಾಮದ ರುದ್ರ ಭೂಮಿಯಲ್ಲಿ ಅಂತಿಮ ಸಂಸ್ಕಾರ ನೆರವೇರಿಸಲಾಗುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಶಾಸಕ ದೊಡ್ಡನಗೌಡ ಪಾಟೀಲ್ ಸೇರಿದಂತೆ ಹಾಲುಮತ ಸಮುದಾಯದ ಗಣ್ಯರು ಮೃತರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.