ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ : ರಸ್ತೆ ಬದಿಯಲ್ಲಿ ಸಂಚರಿಸುತಿದ್ದ ಪಾದಾಚಾರಿ ಮೇಲೆ ರಾಜ್ಯ ಸಾರಿಗೆ ಸಂಸ್ಥೆ ಬಸ್ ಹರಿದ ಪರಿಣಾಮ ಅವನ ಬಲಗಾಲಿನ ಪಾದ ನುಜ್ಜುಗುಜ್ಜಾದ ಘಟನೆ ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಯಲಬುರ್ಗಾ ತಾಲೂಕಿನ ಹಿರೇಅರಳಹಳ್ಳಿ ಗ್ರಾಮದ ನಿವಾಸಿ ಅಮರಪ್ಪ ಹನುಮಪ್ಪ ತೆಗ್ಗಿಹಾಳ (55) ಎಂಬಾತನ ಬಲಗಾಲು ಬಸ್ ಗಾಲಿಗೆ ಸಿಲುಕಿ ಪಾದ ನುಜ್ಜುಗುಜ್ಜಾಗಿದೆ. ಈ ಘಟನೆ ಕುಷ್ಟಗಿ ಪಟ್ಟಣದ ರಾಜ್ಯ ಸಾರಿಗೆ ಸಂಸ್ಥೆಯ ಕೇಂದ್ರೀಯ ಬಸ್ ನಿಲ್ದಾಣಕ್ಕೆ ತೆರಳುವ ಮುಖ್ಯರಸ್ತೆಯ ಪುರಸಭೆ ವಾಣಿಜ್ಯ ಮಳಿಗೆಗಳ ಮುಂದೆ ನಡೆದಿದೆ. ಕಾಲಿನ ಪಾದ ನುಜ್ಜುಗುಜ್ಜಾಗಿ ತೀವ್ರ ರಕ್ತಸ್ರಾವಕ್ಕೆ ಒಳಗಾಗಿದ್ದ ವ್ಯಕ್ತಿಯನ್ನು ಕಂಡ ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿದ ವೈದ್ಯರು, ರಕ್ತಸ್ರಾವ ನಿಲ್ಲದ ಪರಿಣಾಮ ವ್ಯಕ್ತಿಯನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ.
ವಿಷಯ ತಿಳಿದು ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸರು, ಮಾಹಿತಿ ಪಡೆದುಕೊಂಡಿದ್ದಾರೆ. ಅಪಘಾತ ಪಡಿಸಿದ ಸಾರಿಗೆ ಸಂಸ್ಥೆಗೆ ಸೇರಿದ ಕುಷ್ಟಗಿ ಡಿಪೋ ಬಸ್ಸು ವಶಕ್ಕೆ ಪಡೆದು ಘಟನಾ ಕುರಿತು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.