ಹಿರೇಬನ್ನಿಗೋಳ: ಬಣಿವೆ, ಹೊಟ್ಟು, ಕಟ್ಟಿಗೆಗೆ ಬೆಂಕಿ; ಸುಮಾರು ₹7 ಲಕ್ಷ ಹಾನಿ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಮನೆಯ ಪಕ್ಕದ ಶೆಡ್ಡಿನಲ್ಲಿ ಆಕಸ್ಮಿಕ ಬೆಂಕಿಗೆ ಸುಮಾರು 7 ಲಕ್ಷ ರೂಪಾಯಿ ಬೆಲೆಬಾಳುವ ಕಟ್ಟಿಗೆ ಮತ್ತು ಬಣಿವೆ ಹಾಗೂ ಒಟ್ಟು ಆಹುತಿಯಾದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹಿರೇಬನ್ನಿಗೋಳ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.

ಗ್ರಾಮದ ರೈತ ರಾಮಪ್ಪ ತಂದೆ ಹೊನ್ನಪ್ಪ ಬಳೂಟಗಿ ಎಂಬುವರಿಗೆ ಸೇರಿದ ಮನೆಯ ಪಕ್ಕದ ಶೆಡ್ಡಿನಲ್ಲಿ ಇರಿಸಲಾಗಿದ್ದ ಹೊಸ ಮನೆ ಕಟ್ಟಡದ ಮೇಲ್ಚಾವಣಿಗೆಗಾಗಿ ಬೆಲೆಬಾಳುವ ಸಾಗೋನಿ ಕಟ್ಟಿಗೆ ಹಾಗೂ ತೊಲೆಗಳು ಮತ್ತು ಜೋಳದ ಬಣಿವೆ ಮತ್ತು ಶೇಂಗಾ ಒಟ್ಟು ಸಂಗ್ರಹಿಸಿಟ್ಟಿದ್ದರು. ಆಕಸ್ಮಿಕ ಬೆಂಕಿ ತಗುಲಿಕೊಂಡಿದೆ. ಘಟನಾ ವಿಷಯ ತಿಳಿದ ಅಗ್ನಿಶಾಮಕ ಅಧಿಕಾರಿ ಹಾಗೂ ಸಿಬ್ಬಂದಿ ಕೂಡಲೆ ಗ್ರಾಮಕ್ಕೆ ದಾವಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟಿದ್ದಾರೆ. ಈ ಕುರಿತು ಠಾಣಾಧಿಕಾರಿ ರಾಜು ನರಸಪ್ಪ ಅವರು ಮಾಹಿತಿ ನೀಡಿದ್ದಾರೆ.

ಈ ಬೆಂಕಿ ಅವಘಡಕ್ಕೆ ಸುಮಾರು 7 ಲಕ್ಷ ರೂಪಾಯಿ ಬೆಲೆಬಾಳುವ ಕಟ್ಟಿಗೆ ಹಾಗೂ ಬಣಿವೆ ಮತ್ತು ಒಟ್ಟು ಕಳೆದುಕೊಂಡು ಕಂಗಾಲಾಗಿರುವ ರೈತ ರಾಮಪ್ಪ ಬಳೂಟಗಿ ಸೇರಿದಂತೆ ಗ್ರಾಮಸ್ಥರು ಪರಿಹಾರಕ್ಕಾಗಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.