ವಿಶ್ವ ಮಾನವ ಹಕ್ಕುಗಳು, ಭ್ರಷ್ಟಾಚಾರ ವಿರೋಧಿ ಬ್ಯುರೋ ಸಂಘಟನೆ ಪದಾಧಿಕಾರಿಗಳ ಆಯ್ಕೆ

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ ಸೋಮವಾರ ವಿಶ್ವ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಬ್ಯುರೋ ಸಂಘಟನೆಯ ಜಿಲ್ಲಾ, ತಾಲೂಕು ಹಾಗೂ ನಗರ ಘಟಕಗಳ ನೂತನ ಪದಾಧಿಕಾರಿಗಳ ಆಯ್ಕೆ ಹಾಗೂ ಪದಗ್ರಹಣ ನಡೆಯಿತು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಈ ಕುರಿತು ನಡೆದ ಸಭೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಗಣೇಶ್ ಆರ್.ಜಿ. ಮತ್ತು ಪ್ರೊಫೆಸರ್ ಬಿ.ಕೆ. ಮಾದಿ ಅವರ ನೇತೃತ್ವದಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಜಿಲ್ಲಾಧ್ಯಕ್ಷರಾಗಿ ಡಾ.ಶಿವನಂದ ಗಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ರಾಮಣ್ಣ ಬಿನ್ನಾಳ್, ತಾಲೂಕ ಘಟಕದ ಅಧ್ಯಕ್ಷರಾಗಿ ನಾಗರಾಜ್ ಎಚ್. ಅಜಾಳ, ಉಪಾಧ್ಯಕ್ಷರಾಗಿ ಶೌಕತ್ ಕಾಯಿಗಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಮಹೆಬೂಬ ಕಮ್ಮಾರ್, ಕಾರ್ಯದರ್ಶಿಯಾಗಿ ಸಂಪತ್ ರಾಜ್ ಜೈನ್, ಸಂಘಟನಾ ಕಾರ್ಯದರ್ಶಿಯಾಗಿ ಸಂಗಪ್ಪ ಎಸ್ ಬೋಳುಡ್ಡಿ, ಕುಷ್ಟಗಿ ನಗರ ಘಟಕ ಅಧ್ಯಕ್ಷರಾಗಿ ಯಮನೂರ ಸಂಘಟಿ, ಉಪಾಧ್ಯಕ್ಷರಾಗಿ ಮನ್ಸೂರ ಗುಮಗೇರಿ, ಪ್ರಧಾನ ಕಾರ್ಯದರ್ಶಿಯಾಗಿ ಶರಣು ನಾಯಕ, ಕಾರ್ಯದರ್ಶಿಯಾಗಿ ರಾಜಸಾಬ ಕಲಾಲಬಂಡಿ, ಸಂಘಟನಾ ಕಾರ್ಯದರ್ಶಿಯಾಗಿ ಕಳಕೇಶ್ ಎಚ್. ನಾಯಕ ಇವರನ್ನು ಸರ್ವ ಸದಸ್ಯರ ಸಮ್ಮತಿ ಮೇರೆಗೆ ಆಯಾ ಹುದ್ದೆಗಳಿಗೆ ನೇಮಕ ಮಾಡಲಾಯಿತು.

ಈ ವೇಳೆ ಬಸವರಾಜ ನಾಯಕ್, ಮುರ್ತುಜಾಸಾಬ, ಮಲ್ಲಣ್ಣ ಬಳ್ಳೊಳ್ಳಿ, ಮಕ್ತುಮಸಾಬ ಅತ್ತಾರ, ಇಬ್ರಾಹಿಂ ಸಾಬ ಅಲಿಗಡಿ, ಮಹಾಂತೇಶ ಕಲಬಾವಿ, ದೇವರಾಜ ಅಜಾಳ, ಹಸನ ನದಾಫ, ಶಿವು ಅಜಾಳ, ಪ್ರಶಾಂತ ಹಿರೇಮಠ, ಮಹಮ್ಮದ ಬಂಗ್ಲಿದಾರ, ರಸುಲ ರೋಡ್ಕುಂದ, ನಾಗು ನಾಯಕ, ಶ್ರೀನಿವಾಸ ಬಡಿಗೇರ, ಮೊಹಮ್ಮದ ಶಹೀಲ ಸೇರಿದಂತೆ ಮತ್ತಿತರರಿದ್ದರು ಎಂದು ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮಹೆಬೂಬ ಕಮ್ಮಾರ ಅವರು ತಿಳಿಸಿದರು.