ಪಟ್ಟಣದಲ್ಲಿ 12 ಜನರ ಮೇಲೆ ಹುಚ್ಚುನಾಯಿ ದಾಳಿ

ಸಂಗಮೇಶ ಮುಶಿಗೇರಿ

ಕೃಷಿ ಪ್ರಿಯ ನ್ಯೂಸ್ |

ಕೊಪ್ಪಳ: ಜಿಲ್ಲೆಯ ಕುಷ್ಟಗಿ ಪಟ್ಟಣದಲ್ಲಿ 12 ಜನರ ಮೇಲೆ ಹುಚ್ಚು ನಾಯಿಯೊಂದು ದಾಳಿ ಮಾಡಿ ಸಿಕ್ಕ ಸಿಕ್ಕಲ್ಲಿ ಕಚ್ಚಿದ ಘಟನೆ ಗುರುವಾರ ಸಂಜೆ ವೇಳೆ ನಡೆದಿದೆ.

ಪಟ್ಟಣದ ಗೌಡರ ಓಣಿ, ಇಂದಿರಾ ನಗರ, ಭೋವಿ ಓಣಿ, ಚೆಲುವಾದಿ ಓಣಿ ಸೇರಿದಂತೆ ಬಹುತೇಕ ಏರಿಯಾಗಳಲ್ಲಿ ಹುಚ್ಚನಾಯಿ ದಾಳಿ ಮಾಡಿ ದೇಹದ ಸಿಕ್ಕ ಸಿಕ್ಕ ಭಾಗದಲ್ಲಿ ಕಚ್ಚಿ ರಕ್ತಗಾಯ ಮಾಡಿದೆ. ಸುಮಾರು ಏಳು ವರ್ಷದ ಗಂಡು ಮಗುವಿನ ಕೆನ್ನೆಯ ಭಾಗ ಕಚ್ಚಿದೆ, ಓರ್ವ ಮಹಿಳೆಯ ತೊಡೆಹಿಂದಿನ ಭಾಗ, ಇನ್ನೋರ್ವ ಮಹಿಳೆಯ ಮೋಣಕಾಲು ಕೈ ಭಾಗದಲ್ಲಿ, ಓರ್ವನ ಕಾಲು ಕೈಗಳು ಸೇರಿದಂತೆ ಸುಮಾರು 12ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿ ರಕ್ತಗಾಯಗೊಳಿಸಿದೆ. ಸದ್ಯ ಹುಚ್ಚು ನಾಯಿಯನ್ನು ಜನತೆ ಅಟ್ಟಿಸಿಕೊಂಡು ಹೋಗಿ ‌ಹತ್ಯೆ ಮಾಡಿದ್ದಾರೆ ಎನ್ನಲಾಗಿದೆ. ಮನುಷ್ಯರಷ್ಟೇ ಅಲ್ಲದೇ ಇತರೆ ಆರೋಗ್ಯವಂತ ನಾಯಿಗಳ ಮೇಲೆ ಹುಚ್ಚು ನಾಯಿ ಕಚ್ಚಿರುವ ಶಂಖೆ ವ್ಯಕ್ತವಾಗಿದ್ದು, ಆರೋಗ್ಯವಂತ ನಾಯಿಗಳು ಸಹ ಹುಚ್ಚು ಏರಿ ಮನುಷ್ಯರ ಮೇಲೆ ದಾಳಿ ನಡೆಸುವ ಸಾದ್ಯತೆ ಇದೆ ಎಂದು ಪಟ್ಟಣದ ಜನತೆ ಆತಂಕ ವ್ಯಕ್ತಪಡಿಸಿದ್ದಾರೆ.

ಗಾಯಗೊಂಡವರನ್ನು ಸಾರ್ವಜನಿಕ ಆಸ್ಪತ್ರೆಯಲ್ಲಿ ಆರ್ಥೋ ವೈದ್ಯ ಡಾಕ್ಟರ್ ಶ್ರೀನಿವಾಸ್ ಅವರು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ., ಹುಚ್ಚು ನಾಯಿ ಇತರೆ ನಾಯಿಗಳಿಗೆ ದಾಳಿ ಮಾಡಿರುವ ಸಾಧ್ಯತೆಯಿರುವುದಾಗಿ ಪುರಸಭೆಗೆ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಲಾಗಿದೆ ಎಂದು ತಿಳಿಸಿದರು.