ಸಂಗಮೇಶ ಮುಶಿಗೇರಿ
ಕೃಷಿಪ್ರಿಯ ನ್ಯೂಸ್ |
ಕೊಪ್ಪಳ: ಕ್ರಿಮಿನಾಶಕ ಸಿಂಪಡಿಸಿ ಸರಿಯಾಗಿ ಕೈತೊಳೆಯದೇ ಊಟ ಮಾಡಿದ ರೈತ ಅಸ್ವಸ್ಥನಾಗಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಹೂಲಸಗೇರಿ ಗ್ರಾಮದಲ್ಲಿ ಶನಿವಾರ ನಡೆದಿದೆ.
ಗ್ರಾಮದ ದೇವಪ್ಪ ತಂ.ಮರಿಯಪ್ಪ ಸಂಕ್ಲಾಪೂರು (62) ಮೃತ ದುರ್ದೈವಿ. ಶುಕ್ರವಾರ ದಿನ ತನ್ನ ಜಮೀನಿನಲ್ಲಿ ಬೆಳೆಗಳಿಗೆ ಕ್ರಿಮಿನಾಶಕ ಸಿಂಪಡಿಸಿ ಸಂಜೆ ಮನೆಗೆ ಹಿಂತಿರುಗಿದ್ದಾನೆ. ಮನೆಯಲ್ಲಿ ಚೆನ್ನಾಗಿ ಕೈತೊಳೆದುಕೊಳ್ಳದೇ ಊಟ ಸೇವಿಸಿದ್ದಾನೆ. ರಾತ್ರಿ ವೇಳೆ ಹೊಟ್ಟೆಯಲ್ಲಿ ಸಂಕಟ ಹೆಚ್ಚಾಗಿ ಅಸ್ವಸ್ಥನಾಗಿದ್ದಾನೆ. ಆತನ ಸ್ಥಿತಿ ಗಮನಿಸಿದ ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ ಅಸುನೀಗಿದ್ದಾನೆ. ಈ ಕುರಿತು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.