ಕುಷ್ಟಗಿ ನೂತನ ತಹಸೀಲ್ದಾರ್ ಆಗಿ ರವಿ ಅಂಗಡಿ!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ಕೊಪ್ಪಳ: ಲೋಕಸಭಾ ಚುನಾವಣೆ ಹಿನ್ನೆಲೆ ಜಿಲ್ಲೆಯ ಕುಷ್ಟಗಿ ಗ್ರೇಡ್-1 ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡರ ಅವರನ್ನು ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿಗೆ ವರ್ಗಾವಣೆ ಮಾಡಿದ್ದು, ರಾಯಚೂರು ಜಿಲ್ಲೆಯ ಸಿರವಾರ ತಾಲೂಕು ತಹಸೀಲ್ದಾರ್ ರವಿ ಎಸ್. ಅಂಗಡಿ ಅವರನ್ನು ಕುಷ್ಟಗಿಗೆ ನಿಯೋಜನೆಗೊಳಿಸಿ ರಾಜ್ಯ ಸರ್ಕಾರ ಜ.31 ರಂದು ಆದೇಶ ಹೊರಡಿಸಿದೆ.

2024ರ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ನಿರ್ದೇಶನದಂತೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಮತ್ತು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಮುಂದಿನ ಆದೇಶದವರೆಗೆ ಸ್ಥಳ ನಿಯುಕ್ತಿಗೊಳಿಸಿರುವ ಹುದ್ದೆಗಳಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ತಿಳಿಸಿರುವ ಕಂದಾಯ ಇಲಾಖೆ ಸರ್ಕಾರದ ಅದಿನ ಕಾರ್ಯದರ್ಶಿ ಮುಕ್ತಾರ ಪಾಷಾ ಅವರು, ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಬಿಡುಗಡೆಗೊಂಡು ಹಿಂದಿನ ಹುದ್ದೆಗೆ ಹಾಜರಾಗತಕ್ಕದ್ದು ಎಂದು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.