ಫೆ.16ಕ್ಕೆ ಗ್ರಾಮೀಣ ಪತ್ರಕರ್ತರಿಗೆ ಬಸ್ ಪಾಸ್ – ಸಿಎಂ ಸಿದ್ದರಾಮಯ್ಯ!

ಸಂಗಮೇಶ ಮುಶಿಗೇರಿ

ಕೃಷಿಪ್ರಿಯ ನ್ಯೂಸ್ |

ದಾವಣಗೇರಿ(ಕೊಪ್ಪಳ): ಫೆ.16 ರಂದು ರಾಜ್ಯ ಬಜೆಟ್ ಮಂಡನೆಯಲ್ಲಿ ಕಾರ್ಯನಿರತ ಗ್ರಾಮೀಣ ಪತ್ರಕರ್ತರಿಗೂ ಉಚಿತ ಪ್ರಯಾಣಕ್ಕೆ ಬಸ್ ಪಾಸ್ ಬಗ್ಗೆ ತೀರ್ಮಾನಿಸಿ ಘೋಷಣೆ ಮಾಡಲಾಗುವದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಫೆ.3ರಂದು ದಾವಣಗೇರಿಯಲ್ಲಿ ನಡೆದ ರಾಜ್ಯಮಟ್ಟದ 38ನೇ ಪತ್ರಕರ್ತರ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಯಾವುದೇ ಕಾರಣಕ್ಕೂ ಯಾರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಬಾರದು. ಸಂವಿಧಾನದಡಿ ಪ್ರತಿಯೊಬ್ಬ ಪ್ರಜೆಗೂ ಅಭಿವ್ಯಕ್ತಿ ಸ್ವಾತಂತ್ರ್ಯ ನೀಡಿದೆ. ಅದರಡಿ ಪತ್ರಿಕೆ, ಮಾಧ್ಯಮಗಳು ಸಹ ಬರುತ್ತವೆ. ನೊಂದವರಿಗೆ, ಧ್ವನಿಯಿಲ್ಲದವರಿಗೆ, ನಿರ್ಗತಿಕರಿಗೆ ಮಾಧ್ಯಮ ಧ್ವನಿಯಾಗಬೇಕು ಮೌಢ್ಯ, ಕಂದಾಚಾರ, ಕರ್ಮಸಿದ್ಧಾಂತವನ್ನು ಪತ್ರಕರ್ತರು ಪೋಷಿಸಬಾರದು ಎಂದ ಸಿದ್ದರಾಮಯ್ಯ, ಪಕ್ಷಾತೀತವಾಗಿ, ಧರ್ಮಾತೀತವಾಗಿ, ಜ್ಯಾತ್ಯಾತೀತವಾಗಿ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಕೇವಲ ಕಾಂಗ್ರೆಸ್ ನವರಿಗೆ ಯೋಜನೆಗಳನ್ನು ಕೊಡುತ್ತಿಲ್ಲ. ಈ ಕಾರ್ಯಕ್ರಮಗಳು ಬಡವರ ಪಾಲಿಗೆ ಅನುಕೂಲವಾಗಿದೆ. ಈ ಕುರಿತು ವರದಿ ಪ್ರಕಟಿಸಿ ಎಂದು ಹೇಳುವುದಿಲ್ಲ. ಆದರೆ, ವರದಿ ಪ್ರಕಟಿಸುವ ಮುನ್ನ ಭೌತಿಕವಾಗಿ ಪರಿಶೀಲನೆ ಮಾಡಿ ವರದಿ ಮಾಡಬೇಕು. ನೂರಕ್ಕೆ ನೂರರಷ್ಟು ಅಲ್ಲದಿದ್ದರೂ ಕನಿಷ್ಠ 90 ರಷ್ಟು ಸತ್ಯಾಸತ್ಯತೆ ಬಗ್ಗೆ ಪತ್ರಕರ್ತರು ವರದಿ ಮಾಡಿದರೆ ಮಾತ್ರ ಸಮಾಜದಲ್ಲಿ ಸುಧಾರಣೆ ತರಲು ಸಾಧ್ಯ ಎಂದು ಹೇಳಿದರು.

ಸುವರ್ಣ ನ್ಯೂಸ್ ಸಂಪಾದಕ ಅಜಿತ್ ಹನುಮಕ್ಕನವರ ಮಾತನಾಡಿ, ಸಮಾಜದಲ್ಲಿ ನೊಂದವರು ಸೇರಿದಂತೆ ಎಲ್ಲಾ ರಂಗದವರಿಗೂ ಮಧ್ಯಮದವರು ಧ್ವನಿಯಾಗುತ್ತಾರೆ. ಆದರೆ, ಮಾಧ್ಯಮಕ್ಕೆ ಯಾರೂ ಧ್ವನಿಯಾಗುವುದಿಲ್ಲ. ಮಾಧ್ಯಮದಲ್ಲಿ ಎಲ್ಲರೂ ಸ್ಥಿತಿವಂತರಿಲ್ಲ. ಪತ್ರಕರ್ತರ ರಕ್ಷಣೆಗೆ ಸರ್ಕಾರ ಧ್ವನಿಯಾಗಬೇಕು ಎಂದು ಹೇಳಿದರು.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಸಿ. ಲೋಕೇಶ್, ವಿಜಯ ಕರ್ನಾಟಕ ಕಾರ್ಯನಿರ್ವಾಹಕ ಸಂಪಾದಕ ಸುದರ್ಶನ್ ಚನ್ನಂಗಿಹಳ್ಳಿ, ತೋಟಗಾರಿಕೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸ್ವಾಗತ ಸಮಿತಿ ಅಧ್ಯಕ್ಷ ಎಸ. ಎಸ್. ಮಲ್ಲಿಕಾರ್ಜುನ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಮಾಧ್ಯಮ ಗ್ರಾಮ ವಾಸ್ತವ್ಯದ ಪೋಸ್ಟರ್, ಸಮ್ಮೇಳನದ ಸ್ಮರಣ ಸಂಚಿಕೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಯುಟೂಬ್ ಚಾನೆಲ್ ಅನ್ನು ಮುಖ್ಯಮಂತ್ರಿ ಮಂತ್ರಿ ಸಿದ್ದರಾಮಯ್ಯ ಅವರು ಅನಾವರಣಗೊಳಿಸಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಮಂತ್ರಿ ಮಾಧ್ಯಮ ಸಲಹೆಗಾರ ಕೆ.ಬಿ.ಪ್ರಭಾಕರ ಶಾಸಕ ಡಾ.ಶಾಮನೂರು ಶಿವಶಂಕ್ರಪ್ಪ, ಎಸ್ಸಿ ಉಮಾ, ಜಿ.ಪಂ.ಸಿಇಒ ಸೇರಿದಂತೆ ಅನೇಕ ಘಣ್ಯರು ಉಪಸ್ಥಿತರಿದ್ದರು.

ನೊಂದವರಿಗೆ, ಧ್ವನಿಯಿಲ್ಲದವರಿಗೆ, ನಿರ್ಗತಿಕರಿಗೆ ಮಾಧ್ಯಮ ಧ್ವನಿಯಾಗಬೇಕು ಮೌಢ್ಯ, ಕಂದಾಚಾರ, ಕರ್ಮಸಿದ್ಧಾಂತವನ್ನು ಪತ್ರಕರ್ತರು ಪೋಷಿಸಬಾರದು

ಸಿದ್ದರಾಮಯ್ಯ, ಮುಖ್ಯಮಂತ್ರಿ.